ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 20000 ಸ್ಕಾಲರ್ಶಿಪ್ ನೀಡಲು ಅರ್ಜಿ ಆಹ್ವಾನ LIC Gloden jubile scholarship
ಕೆಲವರಿಗೆ ಎಲ್ಐಸಿ ಎಂದರೆ ತಕ್ಷಣ ನೆನಪಿಗೆ ಬರುವುದು ಹಲವಾರು ವಿಮೆಗಳನ್ನು ಮಾಡುವ ಸಂಸ್ಥೆಯೆಂದು ಆದರೆ ಕೇವಲ ವಿಮೆಗೆ ಸೀಮಿತವಾಗದೆ ಹಲವಾರು ಸೇವಾಕಾರ್ಯಗಳನ್ನು ಸಹ ಎಲ್ಐಸಿ ಮಾಡುತ್ತಿದೆ, ಅಂತಹ ಒಂದು ಕಾರ್ಯವೆಂದರೆ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದೊಡ್ಡಮಟ್ಟದ ಸ್ಕಾಲರ್ಶಿಪ್ ನೀಡಲು ಎಲ್ಐಸಿ ಮುಂದಾಗಿದೆ.
ಎಲ್ಐಸಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ನೀಡಲು ಹಿಂದುಳಿದ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಸಲ್ಲಿಸಲು ಬೇಕಾದ ಅಂಶಗಳು :-
* ಎಸ್ ಎಸ್ ಎಲ್ ಸಿ ಅಥವಾ ಪಿಯುಸಿಯಲ್ಲಿ 60% ಶೇಕಡವಾರುಗಳಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಅವರು ಈಗ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರಬೇಕು (ಉನ್ನತ ಶಿಕ್ಷಣ).
ಇಂಜಿನಿಯರಿಂಗ್ ಪದವಿ ಡಿಪ್ಲೋಮೋ ಐಟಿಐ ವೈದ್ಯಕೀಯ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಬಹುದು.
* ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಾರ್ಷಿಕ ಆದಾಯ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು.
* ಪ್ರಥಮ ಪಿಯುಸಿ ಹೆಣ್ಣುಮಕ್ಕಳಿಗೆ ಸ್ಪೆಷಲ್ ಗರ್ಲ್ ಚೈಲ್ಡ್ ಸ್ಕಾಲರ್ಶಿಪ್ ಗೆ ಆಯ್ಕೆಯಾದ ಹೆಣ್ಣುಮಕ್ಕಳಿಗೆ 10000 ವಾರ್ಷಿಕವಾಗಿ ನೀಡಲಾಗುತ್ತದೆ.
ಅರ್ಜಿಸಲ್ಲಿಸಲು ಬೇಕಾದ ದಾಖಲಾತಿಗಳು :
ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ.
ಪಿಯುಸಿ ಪಾಸಾದವರಿಗೆ ಪಿಯುಸಿ ಅಂಕಪಟ್ಟಿ.
ಆಧಾರ್ ಕಾರ್ಡ್.
ಬ್ಯಾಂಕ್ ಪಾಸ್ ಬುಕ್ .
ಆದಾಯ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 31-12-2020
ವಿಶೇಷ ಮಾಹಿತಿ
ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಅನ್ನು ಒಂದು ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಕೊಡಲಾಗುತ್ತದೆ ಮತ್ತು ಯಾವುದೇ ಮಾಹಿತಿ ತಪ್ಪಾಗಿ ನೀಡಿದ್ದಾರೆ ಅಂತಹವರ ಮೇಲೆ ಕ್ರಮಗಳನ್ನು ಜರುಗಿಸಲಾವುದು.
ಅರ್ಜಿ ಸಲ್ಲಿಸುವ ವಿಧಾನ :
Online Application ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಎಲ್ ಐ ಸಿ ವೆಬ್ ಸೈಟ್ ಅಥವಾ ಹತ್ತಿರದ ಎಲ್ ಐ ಸಿ ಕಛೇರಿಯನ್ನು ಸಂರ್ಪಕಿಸಿ.
0 ಕಾಮೆಂಟ್‌ಗಳು