251 ರೂ ಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿದ್ದ ರಿಂಗಿಂಗ್ ಬೆಲ್ ಕಂಪನಿಯ ಮಾಲಿಕ ಈಗ ಪೊಲೀಸರ ಅತಿಥಿ 251 rs freedom Smart phone scam
ಕೆಲವರ್ಷಗಳ ಹಿಂದೆ 251 ರೂಪಾಯಿಗೆ ಸ್ಮಾರ್ಟ್ ಫೋನ್ ದೊರೆಯುತ್ತದೆ ಎಂಬ ಸುದ್ದಿ ದಿಡೀರನೆ ಹಬ್ಬಿಕೊಂಡಿತ್ತು. ನಮ್ಮಲ್ಲಿ ಎಷ್ಟು ಮಂದಿ 251 ರೂಪಾಯಿಯ ಸ್ಮಾರ್ಟ್'ಫೋನಿಗೆ ವೆಬ್ಸೈಟ್ನಲ್ಲಿ ಆರ್ಡರ್ ಕೂಡ ಮಾಡಿ ಆಗಿತ್ತು , ಇನ್ನು ಎಷ್ಟು ಮಂದಿ ನಾನು ಆರ್ಡರ್ ಮಾಡಲಿಲ್ಲವೆಂದು ಒಳ್ಳೆ ಅವಕಾಶ ಕಳೆದುಕೊಂಡೆ ಎಂದು ಎನ್ನುತ್ತಿದ್ದರು.
ಒಟ್ಟಾರೆ ಹೇಳುವುದಾದರೆ 6.5 ಕೋಟಿಗೂ ಅಧಿಕ ಬುಕ್ಕಿಂಗ್ ಗಳು ಆರ್ಡರ್ ಆಗಿದ್ದವು , ರಿಂಗಿಂಗ್ ಬೆಲ್ಸ್ rining bell company ಕಂಪನಿಯ ವೆಬ್ಸೈಟ್ ಸರ್ವರ್ ಕೈಕೊಟ್ಟ ಕಾರಣ ಇದರ ಬುಕಿಂಗ್ ಸಂಖ್ಯೆ ಕಡಿಮೆಯಾಯಿತು.
ರಿಂಗಿಂಗ್ ಬೆಲ್ಸ್ ಕಂಪನಿಯು ಕೂಡ 30 ಲಕ್ಷ ಜನರಿಗೆ ತಕ್ಷಣಕ್ಕೆ 251 ರೂಪಾಯಿಗೆ ಸ್ಮಾರ್ಟ್ ಫೋನ್ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಫೋನ್ಗಳನ್ನು ವಿತರಿಸಿದ ವರದಿಯಾಗಿಲ್ಲ.
2016 ರಲ್ಲಿ ಸ್ಮಾರ್ಟ್ಫೋನ್ ಕೊಡುವುದಾಗಿ ವಂಚಿಸಿದ್ದ ರಿಂಗಿಂಗ್ ಬೆಲ್ಸ್ rining bell company ಕಂಪನಿ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿ ಡ್ರೈ ಫ್ರೂಟ್ಸ್ ಮತ್ತು ಸ್ಪೈಸಸ್ ಹಬ್ ವಂಚನೆ ಪ್ರಕರಣದಲ್ಲಿ ಸುಮಾರು 200 ಕೋಟಿ ಯನ್ನು ವಂಚಿಸಿದ ಮೋಹಿತ್ ಗೊಯಲ್ Mohit Goel ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
0 ಕಾಮೆಂಟ್‌ಗಳು