ನ್ಯಾಯಬೆಲೆ ಅಂಗಡಿ ಗೊತ್ತು ಆದರೆ ಅಕ್ಕಿ ATM ಬಗ್ಗೆ ಗೊತ್ತಾ ?
ಕಾಲ ಕಳೆದಂತೆ ಜಗತ್ತು ಹಲವರು ಆವಿಷ್ಕಾರಗಳನ್ನು ತನ್ನೊಳಗೆ ಮಾಡಿಕೊಳ್ಳುತ್ತಿದೆ ಆಧುನಿಕತೆಯ ಪ್ರಾರಂಭದಿಂದಲೂ ನಾವು ಒಂದಲ್ಲ ಒಂದು ಹೊಸ ವಿಷಯವನ್ನು ಮತ್ತು ಯಾಂತ್ರಿಕ ಬದುಕಿಗೆ ಹೊಂದಿಕೊಳ್ಳುತ್ತವೆ.
ನಾವು ಹಿಂದೆಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯನ್ನು ಕೊಳ್ಳುವಾಗ ಜನರ ಮಧ್ಯೆ ಸರದಿ ಸಾಲಿನಲ್ಲಿ ನಿಂತು ನಮ್ಮ ಪಡಿತರವನ್ನು ಪಡೆದುಕೊಳ್ಳುತ್ತಿದ್ದರು.
ಈಗ ಕಾಲ ಬದಲಾದಂತೆ ನ್ಯಾಯಬೆಲೆ ಅಂಗಡಿಯಲ್ಲಿ ಹೊಸ ಆವಿಷ್ಕಾರ ಪ್ರಾರಂಭವಾಗಿದೆ ಅಂದರೆ ಜನರ ಸಮಯವನ್ನು ಉಳಿತಾಯ ಮಾಡಲು ಅಕ್ಕಿಯ ಎಟಿಎಂ (Rice ATM) ಗಳನ್ನು ಪ್ರಾರಂಭ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ ಅಕ್ಕಿ ಎಟಿಎಂ ಗಳು ಪ್ರಾರಂಭವಾಗಿದ್ದು ಕಾರ್ಯವನ್ನು ನಿರ್ವಹಿಸುತ್ತಿವೆ.
ಮತ್ತು ಈ ಯೋಜನೆಯು ದೇಶದ ಐದು ರಾಜ್ಯಗಳಲ್ಲಿ ಈಗಾಗಲೇ ಕಾರ್ಯವನ್ನು ನಿರ್ವಹಿಸುತ್ತಿದೆ.
(ಉತ್ತರ ಪ್ರದೇಶ ಹರಿಯಾಣ ಕರ್ನಾಟಕ ಮಹಾರಾಷ್ಟ್ರ ಉತ್ತರಾಖಾಂಡ).
ಯೋಜನೆಯ ಲಾಭಗಳು :-
1. ದಿನದ 24 ಗಂಟೆಯೂ ಕೂಡ ತೆರೆದಿರುತ್ತದೆ.
2. ಜನರ ಸಮಯವನ್ನು ಉಳಿಸುತ್ತದೆ.
3. ಅಕ್ರಮ ಅಕ್ಕಿ ಸಾಗಾಣಿಕೆಯನ್ನು ತಡೆಯುತ್ತದೆ.
4. ಅಕ್ಕಿ ಬೆಲೆ ಮತ್ತು ತೂಕ ನಿಖರವಾಗಿರುತ್ತದೆ.
ಇನ್ನು ಕೆಲವೇ ದಿನಗಳಲ್ಲಿ ನಮ್ಮ ಊರುಗಳಲ್ಲೂ ಅಕ್ಕಿ ಎಟಿಎಂ ಅನ್ನು ನೋಡಬಹುದು.
0 ಕಾಮೆಂಟ್‌ಗಳು