ಸಾಮಾಜಿಕ ಜಾಲ ತಾಣಗಳು ನಿಮ್ಮ ಡಾಟಾವನ್ನು ಕದಿಯುತ್ತಿರುವ ಬಗ್ಗೆ ನಿಮ್ಮಗೆಷ್ಟು ಗೊತ್ತು ? Data Hacking

 

ಸಾಮಾಜಿಕ ಜಾಲ ತಾಣಗಳು ನಿಮ್ಮ ಡಾಟಾವನ್ನು ಕದಿಯುತ್ತಿರುವ ಬಗ್ಗೆ ನಿಮ್ಮಗೆಷ್ಟು ಗೊತ್ತು ? Data Hacking



    ಸ್ನೇಹಿತರೆ ಹಿಂದೆಲ್ಲ ಮನೆ ದೇವಸ್ಥಾನ ಬ್ಯಾಂಕ್ ಇತ್ಯಾದಿ ಕಳ್ಳತನಗಳು ಆಗುತ್ತಿದ್ದದ್ದು ಸಾಮಾನ್ಯವಾಗಿತ್ತು.ಆದರೆ ಈಗಿನ ಕಳ್ಳತನಗಳು ಪರೋಕ್ಷವಾಗಿ ಅಂದರೆ ಎಲ್ಲೋ ಕುಳಿತ ಕಳ್ಳ ನಮ್ಮೆಲ್ಲ ಮಾಹಿತಿಗಳನ್ನು ಕದ್ದು ಅದನ್ನು ದುರುಪಯೋಗಪಡಿಸಿಕೊಳ್ಳುವ ಹೊಸ ಕಳ್ಳತನ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ.

          ಅಂದರೆ ನಮಗೆಲ್ಲಾ ತಿಳಿದಿರುವ ಹಾಗೆ ಹಾಕಿಂಗ್ ಎಂಬ ಭೂತ ಈ ಪ್ರಪಂಚದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂದರೆ ನಮಗೆ ತಿಳಿಯದ ಹಾಗೆ ನಮ್ಮ ಮಾಹಿತಿಗಳನ್ನು ಸಂಗ್ರಹಿಸುವ Modern ಕಳ್ಳತನವಾಗಿದೆ.

ಇತ್ತೀಚಿನ ವರದಿಯ ಪ್ರಕಾರ ವಾಟ್ಸಾಪ್ ಫೇಸ್ಬುಕ್ ಇನ್ಸ್ಟ್ ಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳು ನಮ್ಮ ಮೊಬೈಲ್ ಡೇಟಾವನ್ನು ಸೋರಿಕೆ ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ....,

ವಾಟ್ಸಪ್ (Whats up) ಕಂಪನಿಯು ಇತ್ತೀಚೆಗೆ ತನ್ನ ಪ್ರೈವೇಟ್ ಸಿಯಲ್ಲಿ ಮಾಡಿದ ಬದಲಾವಣೆ ದೊಡ್ಡ ಅವಾಂತರಕ್ಕೆ ಸೃಷ್ಟಿಯಾಗಿದೆ ಮತ್ತು ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಇದರಿಂದ ಟೆಸ್ಲಾ ಕಾರ್ ಕಂಪನಿಯ ಸಂಸ್ಥಾಪಕರು ಮತ್ತು ಸಿಇಓ ಆದ Elon Musk ರವರು ಈ ರೀತಿಯಾದ ಟ್ವೀಟ್ ಮಾಡಿದ್ದರು.



ಹೀಗಾಗಿ ಎಲ್ಲಾ ಸಾಮಾಜಿಕ ಜಾಲತಾಣ ಗಳಿಗಿಂತ ಸಿಗ್ನಲ್ ಮೆಸೆಂಜರ್ ಆಪ್ signal messenger app ಬಹಳ ಉತ್ತಮವಾಗಿದೆ ಎಂದು ಹಲವಾರು ಜನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಈ ಆಪ್ ನಲ್ಲಿ ಡಾಟಾ ಪ್ರೈವೇಸಿ ಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದು ತಿಳಿಸಲಾಗಿದೆ.
ಮೊನ್ನೆ ಸಿಗ್ನಲ್ ಮೆಸೆಂಜರ್ ಆಪ್ ಬಿಡುಗಡೆ ಮಾಡಿದ್ದ ಫೋಟೋದಲ್ಲಿ ಸಿಗ್ನಲ್ ಮೆಸೆಂಜರ್ ಆಪ್ ನ ಪ್ರೈವೆಸಿ ಪಾಲಿಸಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು