ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ದಲಿತರಿಗೆ ಸಂವಿಧಾನದ ಅಡಿಯಲ್ಲಿ ಜಾತಿ ಮೀಸಲಾತಿ ಪಡೆಯಲು ಸಾಧ್ಯವಿಲ್ಲ - ಕಾನೂನು ಸಚಿವ ರವಿ ಶಂಕರ್ ಪ್ರಸಾದ್
ಹಾಗದರೆ 1950 ರಲ್ಲಿ ಜವಹರಲಾಲ್ ನೆಹರು ಮಾಡಿದ ಮೀಸಲಾತಿ ಕಾನೂನು ಹೇಗಿತ್ತು ?
ಹಿಂದೆಲ್ಲ ಹಿಂದೂ ಧರ್ಮದಿಂದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದರು ಹಿಂದೂ ಧರ್ಮದ ಜಾತಿಯ ಆಧಾರದ ಮೇಲಿರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು ಆದರೆ ಅದಕ್ಕೆ ಈಗ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ದಲಿತರು ಮತಾಂತರಗೊಂಡರೆ ಅಂತಹವರು ಸರ್ಕಾರದ ಯಾವುದೇ ಮೀಸಲಾತಿಯೇ ಅರ್ಹರಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರದ ಕಾನೂನು ಸಚಿವ ರವಿಶಂಕರ್ ತಿಳಿಸಿದ್ದಾರೆ.
ಸಂವಿಧಾನದ ಪರಿಶಿಷ್ಟ ಜಾತಿ ಪ್ಯಾರಾ (3)ರ ಆದೇಶದ ಪ್ರಕಾರ ಹಿಂದೂ ಸಿಖ್ ಅಥವಾ ಬೌದ್ಧಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಅಂತಹ ವ್ಯಕ್ತಿ ಯಾವುದೇ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.
1950 ನೆಹರು ಸರ್ಕಾರವು ಪರಿಶಿಷ್ಟ ಜಾತಿ ಯನ್ನು ಕೇವಲ ಹಿಂದೂ ಧರ್ಮಕ್ಕೆ ಸೀಮಿತಗೊಳಿಸಿತು ಆದರೆ
ಇದನ್ನು 1956 ರಲ್ಲಿ ಸಿಖ್ ಧರ್ಮಕ್ಕೆ ಮತ್ತು 1990 ರಲ್ಲಿ ಬೌದ್ಧಧರ್ಮಕ್ಕೆ ವಿಸ್ತರಿಸಲಾಯಿತು.
0 ಕಾಮೆಂಟ್‌ಗಳು