ಹಾಲು ಉತ್ಪಾದಕ ಒಕ್ಕೂಟ ದಕ್ಷಿಣ ಕನ್ನಡ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ DKMUL Recruitment 2021 Apply online
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಸಂಗ್ರಹಿಸಿ ಸಂಸ್ಕರಣೆ ಮತ್ತು ವಿವಿಧ ಉತ್ಪನ್ನಗಳ ತಯಾರಿಕೆ ಮಾಡಿ ಗ್ರಾಹಕರಿಗೆ ಒದಗಿಸುತ್ತಿದ್ದು ಇಲ್ಲಿನ ಕೆಲಸಕಾರ್ಯಗಳಿಗೆ ನೆರವಾಗಲು ಹಲವಾರು ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 80 ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ.
1. ಸಹಾಯಕ ವ್ಯವಸ್ಥಾಪಕರು
ಒಟ್ಟು 7 ಹುದ್ದೆಗಳು
ವೇತನ ಶ್ರೇಣಿ :- 52650 - 97100
ಅರ್ಹತೆ :- ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಪಶು ವೈದ್ಯಕೀಯ ವಿಜ್ಞಾನದಲ್ಲಿ B.V.Sc&AH ಪದವೀಧರರಾಗಿರಬೇಕು.
2. ತಾಂತ್ರಿಕ ಅಧಿಕಾರಿ
ಒಟ್ಟು 4 ಹುದ್ದೆಗಳು
ವೇತನ ಶ್ರೇಣಿ : 43100 - 83900
ಅರ್ಹತೆ : ಬಿಎಸ್ಸಿ ಅಥವಾ ಬಿಟೆಕ್ ಅಥವಾ ಎಂಎಸ್ಸಿ ಇನ್ ಟೆಕ್ನೋಲಜಿ ಅಥವಾ ಬಿಎಸ್ಸಿ ಡೈರಿ ಟೆಕ್ನಾಲಜಿ ಪದವೀಧರರಾಗಿರಬೇಕು.
3. ತಾಂತ್ರಿಕ ಅಧಿಕಾರಿ (ಪರಿಸರ)
ಒಟ್ಟು 1 ಹುದ್ದೆ
ವೇತನ ಶ್ರೇಣಿ : 43100 - 83900
ಅರ್ಹತೆ :BE in Environment B.E in chemistry M.Sc in environment science ಪದವೀಧರರಾಗಿರಬೇಕು.
4. ತಾಂತ್ರಿಕ ಅಧಿಕಾರಿ (ಇಂಜಿನಿಯರಿಂಗ್)
ಒಟ್ಟು 1 ಹುದ್ದೆ
ವೇತನ ಶ್ರೇಣಿ : 43100 - 83900
ಅರ್ಹತೆ : ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಇ ಅಥವಾ ಬಿಟೆಕ್ ಪದವೀಧರರಾಗಿರಬೇಕು.
5. ವಿಸ್ತರಣಾಧಿಕಾರಿ
ಒಟ್ಟು 8 ಹುದ್ದೆಗಳು
ವೇತನ ಶ್ರೇಣಿ : 33450 - 62600
ಅರ್ಹತೆ ಯಾವುದೇ ಪದವಿ ಪಡೆದಿರಬೇಕು.
6. ಡೈರಿ ಸೂಪರ್ವೈಸರ್
ಒಟ್ಟು 5 ಹುದ್ದೆಗಳು
ವೇತನ ಶ್ರೇಣಿ : 33450 - 62600
ಇಲೆಕ್ಟ್ರಿಕಲ್ /ಮೆಕಾನಿಕಲ್ / ಸಿವಿಲ್ / ಇಲೆಕ್ಟ್ರಿಕಲ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಷಯಗಳಲ್ಲಿ ಡಿಪ್ಲೋಮೋ ತೇರ್ಗಡೆಯಾಗಿರಬೇಕು.
7. ಆಡಳಿತ ಸಹಾಯಕರು
ಒಟ್ಟು 5 ಹುದ್ದೆಗಳು
ವೇತನ ಶ್ರೇಣಿ: 27650 - 52650
ಯಾವುದೇ ಪದವಿಯಲ್ಲಿ ಪದವೀಧರರಾಗಿರಬೇಕು.
8. ಕೆಮಿಸ್ಟ್
ಒಟ್ಟು 12 ಹುದ್ದೆಗಳು
ವೇತನ ಶ್ರೇಣಿ 27650 - 52650
ಅರ್ಹತೆ : ರಸಾಯನಶಾಸ್ತ್ರ ವಿಷಯದಲ್ಲಿ ಐಚಿಕ ವಿಷಯವಾಗಿ ಹೊಂದಿರುವ ವಿಜ್ಞಾನ ಪದವಿ ಬಿಎಸ್ಸಿ ಅಥವಾ ಬಿಎಸ್ಸಿಎಂ ಮೈಕ್ರೋಬಯಾಲಜಿ ಪದವೀಧರರಾಗಿರಬೇಕು.
9. ಲೆಕ್ಕ ಸಹಾಯಕರು
ಒಟ್ಟು 2 ಹುದ್ದೆಗಳು
ವೇತನ ಶ್ರೇಣಿ 27650 - 52650
ಅರ್ಹತೆ : ಬಿಕಾಂ/ಬಿಬಿಎಂ/ಬಿಬಿಎ ಪದವೀಧರರಾಗಿರಬೇಕು.
10. ಕಿರಿಯ ತಾಂತ್ರಿಕರು (ಇಲೆಕ್ಟ್ರಿಷಿಯನ್)
ಒಟ್ಟು 6 ಹುದ್ದೆಗಳು
ವೇತನ ಶ್ರೇಣಿ 21400 - 42000
ಅರ್ಹತೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅದರೊಂದಿಗೆ ಐಟಿಐ ಇಲೆಕ್ಟ್ರಿಷನ್ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.
11. ಕಿರಿಯ ತಾಂತ್ರಿಕರು (ಎಂ.ಆರ್.ಎ.ಸಿ)
ಒಟ್ಟು 7 ಹುದ್ದೆಗಳು
ವೇತನ ಶ್ರೇಣಿ 21400 - 42000
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಇದರೊಂದಿಗೆ ಐಟಿಐ ಎಂ ಆರ್ ಎ ಸಿ ವಿಷಯದಲ್ಲಿ ತೇರ್ಗಡೆಯಾಗಿರಬೇಕು.
12. ಕಿರಿಯ ತಾಂತ್ರಿಕರು (ಇಲೆಕ್ಟ್ರಿಕಲ್ಸ್ ಮೆಕಾನಿಕ್) 6 ಹುದ್ದೆಗಳು
13.ಕಿರಿಯ ತಾಂತ್ರಿಕರು (ಫಿಟ್ಟರ್) 6 ಹುದ್ದೆಗಳು
14.ಕಿರಿಯ ತಾಂತ್ರಿಕರು (ವೆಲ್ಡರ್) 2 ಹುದ್ದೆಗಳು
ವೇತನ ಶ್ರೇಣಿ 21400 - 42000
ಮೇಲಿನ 12,13,14 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು ಮತ್ತು ಐಟಿಐ ವಿಭಾಗದಲ್ಲಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ವಿಷಯದಲ್ಲಿ ತೇರ್ಗಡೆಯಾಗಿರಬೇಕು.
ಎಲ್ಲ ಹುದ್ದೆಗಳಿಗೆ ಸಂಬಂಧಪಟ್ಟಂತೆ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಮೀಸಲಾತಿಯ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯ ಸೂಚನೆಗಳು :
ಭಾರತೀಯ ಪ್ರಜೆಯಾಗಿರಬೇಕು.
ಮೇಲೆ ತಿಳಿಸಿದ ಎಲ್ಲಾ ಹುದ್ದೆಗಳಿಗೆ ಆನ್ ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಪ್ರತ್ಯೇಕ ಶುಲ್ಕ ಮತ್ತು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದು.
ಒಕ್ಕೂಟದಲ್ಲಿ ನೇಮಕಾತಿ ಪ್ರಕಟಣೆಯಲ್ಲಿ ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ತಿಳಿಯದೆ ಅಭ್ಯರ್ಥಿಗಳು ತಪ್ಪಾಗಿದ್ದಲ್ಲಿ ಒಕ್ಕೂಟವು ಜವಾಬ್ದಾರರಾಗಿರುವುದಿಲ್ಲ
ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಆನ್ಲೈನ್ ಅರ್ಜಿಯಲ್ಲಿ ನಮೂದಿಸಿರುವ ಅಂಚೆ ವಿಳಾಸ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಮುಖಾಂತರವೇ ಸಂಪರ್ಕಿಸಲಾಗುವುದು
ವಯೋಮಿತಿ :
18 ವರ್ಷಗಳು ಮತ್ತು
ಪ್ರವರ್ಗ ||-ಎ,||-ಬಿ,|||-ಎ,|||-ಬಿ -38 ವರ್ಷಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1 40 ವರ್ಷಗಳು
ಆಯ್ಕೆ ವಿಧಾನ
ಲಿಖಿತ ಪರೀಕ್ಷೆಯನ್ನು ಮಾಡಲಾಗುವುದು
ಕನ್ನಡ ಭಾಷೆ 50 ಅಂಕಗಳು
ಸಾಮಾನ್ಯ ಇಂಗ್ಲಿಷ್ 25 ಅಂಕಗಳು
ಸಾಮಾನ್ಯ ಜ್ಞಾನ 25 ಅಂಕಗಳು
ಸಹಕಾರ ವಿಷಯಕ್ಕೆ 50 ಅಂಕಗಳು
ಭಾರತ ಸಂವಿಧಾನ 25 ಅಂಕಗಳು
ಸಂಸ್ಥೆಯ ಕಾರ್ಯಕ್ಷೇತ್ರ ಉದ್ದೇಶ ಕಾರ್ಯಚಟುವಟಿಕೆ 25 ಅಂಕಗಳು.
ಅರ್ಜಿ ಸಲ್ಲಿಸುವ ವಿಧಾನ
ಮೊದಲು www.dkmul.com ವೆಬ್ಸೈಟ್ ಗೆ ಭೇಟಿ ನೀಡಿ
Career ಮೇಲೆ ಕ್ಲಿಕ್ ಮಾಡಿ ನಂತರ online application form ಕ್ಲಿಕ್ ಮಾಡಿ .
ಮೊದಲು ನಿಮ್ಮ ಖಾತೆಯನ್ನು ತೆರೆಯಬೇಕು ಹೀಗಾಗಿ ನೀವು ಮೊದಲ ಬಾರಿಗೆ ನೋಂದಣಿ ಮಾಡುತ್ತಿದ್ದೀರಾ ಎಂದಾದರೆ first time user uh register here to create an account ಮೇಲೆ ಕ್ಲಿಕ್ ಮಾಡಿ ಕೊಂಡು ನಿಮ್ಮ ಖಾತೆಯನ್ನು ನೊಂದಣಿ ಮಾಡಬೇಕಾಗುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ Technical Tapasvi ಯುಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಅರ್ಜಿ ತುಂಬುವ ವಿಧಾನವನ್ನು ಅಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಓದಲು ಇಲ್ಲಿ ಕ್ಲಿಕ್ ಮಾಡಿ
1 ಕಾಮೆಂಟ್‌ಗಳು
Hello... ಇದರಲ್ಲಿ ಎಕ್ಸಾಂ syllabus nalli...ಸಹಕಾರ ವಿಷಯ ಅಂತಾ ಇದೆ......ಅದರ meaning swalpa heltiraa
ಪ್ರತ್ಯುತ್ತರಅಳಿಸಿ