ಏನಿದು ಪಿಂಕ್ ವಾಟ್ಸಾಪ್ ? ಅಪಾಯಕಾರಿ ...!!! Pink whatsApp Virus
ಕಳೆದೆರಡು ದಿನಗಳಿಂದ ನಾವು ಗಮನಿಸಿರುವ ಹಾಗೆ ಪಿಂಕ್ ವಾಟ್ಸಪ್ ಬರಲಿದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ಸಂದೇಶಗಳು ಹಲವಾರು ಬಾರಿ ನಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಬಂದಿರುವುದನ್ನು ನಾವು ಗಮನಿಸಿದ್ದೇವೆ.
ವಾಟ್ಸಾಪ್ ಪಿಂಕ್ ಬಣ್ಣಕ್ಕೆ ಅಪ್ಡೇಟ್ ಆಗುತ್ತದೆ ಎಂದು ತಿಳಿದು ಲಕ್ಷಾಂತರ ಜನ ಈಗಾಗಲೇ ವಾಟ್ಸಾಪ್ ಲಿಂಕನ್ನು ಒತ್ತಿದ್ದಾರೆ. ಇದರಿಂದ ಏನೆಲ್ಲ ತೊಂದರೆಗಳು ಆಗಿವೆ ಮತ್ತು ಆಗುತ್ತಿವೆ ಇಂದು ಈಗಾಗಲೇ ಹಲವಾರು ಜನತೆ ತಿಳಿದು ಹೋಗಿದೆ , ಪಿಂಕ್ ವಾಟ್ಸಾಪ್ ಲಿಂಕನ್ನು ಕ್ಲಿಕ್ ಮಾಡಿದ ನಂತರ ಲಿಂಕ್ ತನ್ನಿಂದ ತಾನೇ ತಮ್ಮ ವಾಟ್ಸಪ್ ಗ್ರೂಪ್ ನ ಸದಸ್ಯರು ಮತ್ತು ಅವರ ಗ್ರೂಪ್ ಗಳಿಗೆ ಫಾರ್ವರ್ಡ್ ಆಗುತ್ತಿದೆ,
ಇನ್ನು ಕೆಲವರು ಆಪ ಅನ್ ಇನ್ಸ್ಟಾಲ್ (uninstall) ಆಗುತ್ತಿಲ್ಲವೆಂದು ಫೋನ್ಗಳನ್ನು ರೀಸ್ಟಾರ್ಟ್ ಮಾಡಿ ಪರದಾಡುವ ಪರಿಸ್ಥಿತಿ ಉಂಟಾಯಿತು.
ಶಿವಮೊಗ್ಗ ಸೈಬರ್ ಕ್ರೈಮ್ ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್
ತಿಳಿಸಿರುವಂತೆ ಪಿಂಕ್ ವಾಟ್ಸಪ್ ಲಿಂಕ್ ಇದೊಂದು ಮೊಬೈಲ್ ಡಾಟಾ ಹಾಕಿಂಗ್ ಲಿಂಕ್ ಆಗಿದ್ದು ಇದನ್ನು ಒತ್ತಿದರೆ ನಿಮಗೆ ತಿಳಿಯದೆ ನಿಮ್ಮ ಡಾಟಾ ಸೋರಿಕೆ ಯಾಗುತ್ತದೆ. ಇದರಿಂದ ಸೈಬರ್ ಕ್ರೈಮ್ ಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರಿಂದ ಪಿಂಕು ವಾಟ್ಸಪ್ ನ ಲಿಂಕ್ ಬಂದರೆ ಅದನ್ನು ಡಿಲೀಟ್ ಮಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿದರು.
ಪಿಂಕ್ ವಾಟ್ಸಪ್ ಲಿಂಕ್ ಓತ್ತಿದವರು ಏನು ಮಾಡಬೇಕು ?
ತಮ್ಮ ಮೊಬೈಲ್ ನಲ್ಲಿ ಇರುವ ಪಿಂಕ್ ವಾಟ್ಸಪ್ ಫೈಲ್ ಅನ್ನು ಡಿಲೀಟ್ ಮಾಡಿ.
ನಂತರ ಮೊಬೈಲನ್ನು ರೀಸ್ಟಾರ್ಟ್ ಮಾಡಿ.
0 ಕಾಮೆಂಟ್‌ಗಳು