ಮುರುಡೇಶ್ವರದಲ್ಲಿ ಪತ್ತೆಯಾದ ತಿಮಿಂಗಲ ವಾಂತಿ ಬೆಲೆ ಕೇಳಿದರೆ ಶಾಕ್‌ ಆಗುತ್ತೀರ...!!! whale Vomiting is a very rare event

ಮುರುಡೇಶ್ವರದಲ್ಲಿ ಪತ್ತೆಯಾದ ತಿಮಿಂಗಲ ವಾಂತಿ ಬೆಲೆ ಕೇಳಿದರೆ ಶಾಕ್‌ ಆಗುತ್ತೀರ...!!! whale Vomiting is a very rare event


murudeshwara whale Vomiting


    ಕಡಲ ತೀರದಲ್ಲಿ ಬೆಲೆಬಾಳುವ ಮತ್ತು ಅತ್ಯಂತ ಅಪರೂಪವಾಗಿ ಸಿಗುವ ತಿಮಿಂಗಲದ ವಾಂತಿ (ಅಂಬೆಗ್ರಿಸ್‌) ಮೀನುಗಾರನಿಗೆ ಸಿಕ್ಕಿದ್ದು, ನಂತರ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಹೌದು ಇಂಥದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮುರುಡೇಶ್ವರ ಬಳಿಯ ಕಡಲು ತೀರ
ತಿಮಿಂಗಿಲ ವಾಂತಿಯು ಬಹಳ ಅಪರೂಪದಲ್ಲಿ ನಡೆಯುವ ಘಟನೆಯಾಗಿದ್ದು ಈ ವಾಂತಿಗೆ ಒಂದು ಕೆಜಿಗೆ ಸುಮಾರು ಒಂದು ಕೋಟಿ ಮೌಲ್ಯವಿದೆ ಎಂದು ಅಂದಾಜಿಸಲಾಗಿದೆ ವಿದೇಶಗಳಲ್ಲಿ ತಿಮಿಂಗಲ ವಾಂತಿಗೆ ಬಹು ಬೇಡಿಕೆ ಇದ್ದು 250 ಗ್ರಾಂ ತಿಮಿಂಗಿಲ ವಾಂತಿಗೆ 25 ಲಕ್ಷ ರೂ ಮಾರುಕಟ್ಟೆ ಬೆಲೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ತಿಮಿಂಗಿಲ ವಾಂತಿ ಎಂದರೆ ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೆಗ್ರಿಸ್‌ ಅಥವಾ ತಿಮಿಂಗಿಲ ವಾಂತಿ ಎಂದು ಕರೆಯುತ್ತಾರೆ.ಅಂಬೆಗ್ರಿಸ್‌(Ambergris) ಎಂದು ಇಂಗ್ಲೀಷ್‌ನಲ್ಲಿ ಹೆಸರು.

murudeshwara whale Vomiting

ಈ ತಿಮಿಂಗಲ ವಾಂತಿಯು ಮೊದಲಿಗೆ ಬಹಳ ವಾಸನೆಯಿಂದ ಕೂಡಿದ್ದು ನಂತರ ದಿನಕಳೆದಂತೆ ಸುವಾಸನೆ ಯಾಗಿ ಮಾರ್ಪಡುತ್ತದೆ ಇದನ್ನು ಹೆಚ್ಚಾಗಿ ಸುಗಂಧದ್ರವ್ಯ ತಯಾರಿಕೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಕೊಂಡಿದೆ ಹೀಗಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.

ಅಂತೂ ವಾಂತಿ ಎಂದರೆ ದೂರ ಸರಿಯುತ್ತಿದ್ದ ಜನರು ತಿಮಿಂಗಲ ತನ್ನಲ್ಲಿ ಜೀರ್ಣವಾಗದ ಬೇರೆ ಮೀನುಗಳ ಮೂಳೆಗಳಿಂದ ತಿಂಗಳುಗಟ್ಟಲೆ ತನ್ನ ಹೊಟ್ಟೆಯಲ್ಲಿ ಕಿರಿಕಿರಿ ಅನುಭವಿಸಿ ನಂತರ ಅದು ರಾಸಾಯನಿಕವಾಗಿ ಮಾರ್ಪಟ್ಟು ಹೊರಹಾಕಿದ ತಿಮಿಂಗಿಲ ವಾಂತಿಗೆ ಇರುವ ಬೇಡಿಕೆ ಕಂಡು ಜನರು ಬೆರಗಾಗಿದ್ದು ಸತ್ಯ ಇಂಥದ್ದೊಂದು ಅಪರೂಪದ ಘಟನೆಗೆ ಮುರುಡೇಶ್ವರ ಕಡಲತೀರ ಸಾಕ್ಷಿಯಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು