ಸರ್ಕಾರದಿಂದ ಘೋಷಣೆಯಾಗಿರುವ ಧನಸಹಾಯದ ಪ್ಯಾಕೇಜ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು

ಸರ್ಕಾರದಿಂದ ಘೋಷಣೆಯಾಗಿರುವ ಧನಸಹಾಯದ ಪ್ಯಾಕೇಜ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು Karnataka lockdown package online Application

Karnataka lockdown package online Application

    ಕೊರೋನವೈರಸ್ ಮೊದಲನೇ ಅಲೆಗಿಂತ ಎರಡನೇ ಅಲೆಯು ಹೆಚ್ಚು ಸಾವು-ನೋವುಗಳನ್ನು ತಂದೊಡ್ಡುತ್ತಿರುವುದರಿಂದ ಈಗಾಗಲೇ ರಾಜ್ಯ ಸರ್ಕಾರ ಇಡೀ ಕರ್ನಾಟಕ ರಾಜ್ಯವನ್ನು ಲಾಕ್ಡೌನ್ ಮಾಡಿದೆ ಮೊದಲೇ ಒಂದನೇ ಅಲೆಯಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದ ಕರ್ನಾಟಕದ ಜನರಿಗೆ ಎರಡನೇ ಕೊರೋನ ಅಲೆ ಬಿಸಿತುಪ್ಪವಾಗಿ ಪರಿಣಮಿಸಿದೆ ಆದರೂ ಕೂಡ ಅನಿವಾರ್ಯ ಎಂಬಂತೆ ಎಲ್ಲರೂ ಕೂಡ ಮನೆಯಲ್ಲೇ ಇರುವುದು ಉತ್ತಮ ಅನೇಕರು ಹೇಳುವಂತೆ ಜೀವ ಇದ್ದರೆ ಜೀವನ ಎಂಬ ಮಾತು ನಿಜವಾಗಿದೆ.

ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಯಡಿಯೂರಪ್ಪನವರು ಕರ್ನಾಟಕದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ವರ್ಗಗಳಿಗೆ ಈಗಾಗಲೇ 1,250 ಕೋಟಿ ಆರ್ಥಿಕ ಪ್ಯಾಕೇಜನ್ನು Karnataka Lockdown package  ಘೋಷಣೆ ಮಾಡಲಾಗಿದೆ ಮತ್ತು ಇನ್ನು ಕೆಲವೇ ದಿನಗಳಲ್ಲಿ ಆ ವರ್ಗದ ಕೆಲಸಗಾರರು ಅಥವಾ ಕಾರ್ಮಿಕರು ಆರ್ಥಿಕ ಪ್ಯಾಕೇಜ್ ಗಾಗಿ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ರಾಜ್ಯ ಸರ್ಕಾರ ಮಾಡುತ್ತಿದೆ.

ಈ ಕೆಳಗಿನ ವರ್ಗದವರಿಗೆ ಆರ್ಥಿಕ ಪ್ಯಾಕೇಜನ್ನು ನೀಡಲಾಗುವುದು.


  • ಹೂವು ಬೆಳೆಗಾರರು : ಪ್ರತಿ ಹೆಕ್ಟೇರು ಹಾನಿಗೆ 10,000/- ರೂಗಳನ್ನು ನೀಡಲಾಗುವುದು
  • ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ನಷ್ಟಕ್ಕೆ ಅನುಗುಣವಾಗಿ ಹತ್ತು ಸಾವಿರ ರೂಗಳನ್ನು ನೀಡಲಾಗುವುದು
  • ಆಟೋ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ 3000/- ರೂ ಗಳು
            (ಲೈಸೆನ್ಸ್ ಮತ್ತು ನೋಂದಣಿ ಮಾಡಿಸಿದವರಿಗೆ ಮಾತ್ರ)
  • ಕಟ್ಟಡ ಕಾರ್ಮಿಕರಿಗೆ 3000/- ರೂಗಳು
        (ಕಟ್ಟಡ ಮತ್ತು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿದ ಕಾರ್ಮಿಕರಿಗೆ ಮಾತ್ರ)

  • ಅಸಂಘಟಿತ ವಲಯದ ಕಾರ್ಮಿಕರಿಗೆ 2000/- ರೂಗಳು
        (ಕ್ಷೌರಿಕರು, ಟೈಲರ್ ಗಳು , ಹಮಾಲಿಗಳು , ಅಗಸರು ಚಿಂದಿ ಆಯುವವರು , ಅಕ್ಕಸಾಲಿಗರು , ಮೆಕ್ಯಾನಿಕ್ ಗಳು ,                         ಕಮ್ಮಾರರು ಮತ್ತು ಚಮ್ಮಾರರು)
  • ರಸ್ತೆ ಬದಿಯ ವ್ಯಾಪಾರಿಗಳಿಗೆ 2000/- ರೂಗಳು
        (ಆತ್ಮ ನಿರ್ಭರ್ ನಿಧಿಯಲ್ಲಿ ನೋಂದಣಿಯಾಗಿರಬೇಕು)
  • ಕಲಾವಿದರು ಮತ್ತು ಕಲಾವಿದರ ತಂಡಗಳಿಗೆ 3000/-ರೂಗಳು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಸಂಸ್ಥೆಗಳ ನೋಂದಣಿಯ ಕಾರ್ಡ್
RC ಕಾರ್ಡ್ ಮತ್ತು DL (  ಆಟೋ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಮಾತ್ರ)
ಕಟ್ಟಡ ಕಾರ್ಮಿಕರಿಗೆ (ಲೇಬರ್‌ ಕಾರ್ಡ್)‌
ರಸ್ತೆ ಬದಿಯ ವ್ಯಾಪರಿಗಳಿಗೆ ( ಗುರುತಿನ ಚೀಟಿ)
ಕೆಲಸದ ಗುರುತಿನ ಚೀಟಿ

ಇದನ್ನು ಓದಿರಿ : 

ಕೊರೊನಾ ಪರೀಕ್ಷೆಯ ರಿಪೋರ್ಟ್‌ ನೋಡುವುದು ಹೇಗೆ ? 

Attachments area

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು