ರಾಜ್ಯದ ಜನರಿಗೆ ಕರೆಂಟ್ ಶಾಕ್
ಕಳೆದ ಒಂದು ವರ್ಷಗಳಿಂದ ಕರೋನಾ ವೈರಸ್ ಹರಡುವಿಕೆಯಿಂದ ಲಾಕ್ಡೌನ್ ಪರಿಣಾಮವಾಗಿ ಜನರು ಕೆಲಸ ಕಾರ್ಯಗಳು ಇಲ್ಲದೆ ತಮ್ಮ ಪ್ರತಿನಿತ್ಯದ ಬದುಕಿಗಾಗಿ ಹೋರಾಡುವ ಪರಿಸ್ಥಿತಿ ಎದುರಾಗಿದೆ ಕೆಲವು ದಿನಗಳ ಹಿಂದೆ ಪೆಟ್ರೋಲ್ ನೂರರ ಗಡಿ ದಾಟಿದೆ ಇದೀಗ ರಾಜ್ಯದ ಜನರಿಗೆ ಮತ್ತೊಂದು ಶಾಕ್ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ ಮಾಡಿದೆ ಇದರ ಪರಿಷ್ಕರಣೆಯು 2021 ಏಪ್ರಿಲ್ ಇಂದಲೇ ಜಾರಿಗೆ ಬಂದಿದ್ದು ಆದರೆ ಕಳೆದ ತಿಂಗಳ ವಿದ್ಯುತ್ ಬಿಲ್ ಗಳಲ್ಲಿ ಈ ಪರಿಷ್ಕರಣ ಕಾಣಿಸಿಕೊಂಡಿರಲಿಲ್ಲ ಆದರೆ ಜೂನ್ ತಿಂಗಳಿಂದ ಕಟ್ಟುನಿಟ್ಟಾಗಿ ಪರಿಷ್ಕರಣೆಯನ್ನು ಜಾರಿಗೆ ತರಲಾಗುವುದು ಎಂದು ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.
ರಾಜ್ಯದ ವಿದ್ಯುಚ್ಛಕ್ತಿ ಸಂಸ್ಥೆಗಳು ಹೇಳಿಕೆ ನೀಡಿರುವ ಪ್ರಕಾರ ಪ್ರತಿಯು ಯುನಿಟ್ ಗೆ ಒಂದು ರೂಪಾಯಿ ಹೆಚ್ಚಳ ಮಾಡಬೇಕೆಂದು ಈ ಹಿಂದೆ ಮನವಿ ಮಾಡಿದ್ದೆವು ಆದರೆ ವಿದ್ಯುಚ್ಛಕ್ತಿ ಮಂಡಳಿಯು ಇದನ್ನು ಪರಿಶೀಲಿಸಿ 30 ಪೈಸೆ ಹೆಚ್ಚಿಸಿದೆ.
ಅದೇನೇ ಇರಲಿ ಯಾವಾಗ ಬೆಲೆಗಳು ಹೆಚ್ಚಾದರೂ ಅದಕ್ಕೆ ತಲೆ ಕೊಡುವವರು ಸಾಮಾನ್ಯ ಜನರು ಮಾತ್ರ ಈ ಪರಿಸ್ಥಿತಿಯಲ್ಲಿ ಒಂದರಮೇಲೊಂದು ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
0 ಕಾಮೆಂಟ್‌ಗಳು