1 ನೇ ತರಗತಿಯಿಂದ 8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ 1 ರಿಂದ 8 ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ
ಮಧ್ಯಾಹ್ನದ ಊಟದ ಯೋಜನೆಯಡಿ ಮೇ, ಜೂನ್ ತಿಂಗಳ 2021 ರ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚ (ಕುಕ್ಕಿಂಗ್ ಕಾಸ್ಟ್) ದ ನಗದು ಹಣವನ್ನು ಅರ್ಹ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಸೂಚಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಕೂಡ ನಿರ್ದೇಶನ ನೀಡಿದೆ.
ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿಯವರೆಗಿನ ಫಲಾನುಭವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ 2021 ರ ಮೇ ಜೂನ್ ತಿಂಗಳಿನ 50 ದಿನ ಬೇಸಿಗೆ ರಜೆ ಅವಧಿ ಎಂದು ಪರಿಗಣಿಸಲಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಸೇರಿದಂತೆ ಹಲವು ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ಇನ್ನೂ ಹೊಂದಿಲ್ಲದಿದ್ದರೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಶೂನ್ಯ ಬ್ಯಾಂಕ್ ಠೇವಣಿ ಖಾತೆ ತೆರೆಯಲು ಸಮೀಪದ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಕಚೇರಿ ಸೇರಿದಂತೆ ವ್ಯಾಪ್ತಿಯಲ್ಲಿ ನಿರ್ದೇಶನ ನೀಡುವಂತೆ ಜಿಲ್ಲೆಯ ಪಂಚಾಯತಿ ಕಾರ್ಯನಿರ್ವಹಣಾಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ರೀತಿಯಲ್ಲಿ ಕೇಂದ್ರಸರ್ಕಾರದ ಅದ್ಭುತವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ 1 ನೇ ತರಗತಿಯಿಂದ 8 ನೇ ತರಗತಿಯವರೆಗೆ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು 50 ದಿನಗಳ ಬಿಸಿಊಟದ ಖರ್ಚಿನ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಮಾಡುವುದಕ್ಕೆ ಸರಕಾರ ಒಂದು ಅದ್ಭುತವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ವಿದ್ಯಾರ್ಥಿಗಳು ಅಕೌಂಟ್ ಡೀಟೇಲ್ಸ್ ಗಳನ್ನು ನಿಮ್ಮ ಶಾಲೆಯಲ್ಲಿ ಕೊಟ್ಟಿಲ್ಲ ಅಂದರೆ ಕೂಡಲೇ ಹೋಗಿ ನಿಮ್ಮ ಶಾಲೆಗೆ ಕೊಡಬೇಕು ಕೊಟ್ಟರೆ ಮಾತ್ರ ಈ ಹಣ ನಿಮ್ಮ ಖಾತೆಗೆ ಜಮಾ ವಾಗುತ್ತದೆ.
ಇದನ್ನು ಓದಿ : ವಾರಕ್ಕೆ ಒಮ್ಮೆಯಾದರೂ ಚಪ್ಪಲಿ ಇಲ್ಲದೆ ನಡೆಯಬೇಕು
0 ಕಾಮೆಂಟ್‌ಗಳು