ಜನನ ಪ್ರಮಾಣ ಪತ್ರಕ್ಕೆ ಆನ್ ಲೈನ್ ಅರ್ಜಿ ಪ್ರಾರಂಭವಾಗಿದೆ
ಮಗು ಜನಿಸಿದ 21 ದಿನದ ಒಳಗಾಗಿ ಜನನ ಪ್ರಮಾಣ ಪತ್ರವನ್ನು ಮಾಡಿಸುವುದು ಮಗುವಿನ ಪ್ರಮುಖ ದಾಖಲೆಯಾಗಿದೆ ಈ ದಾಖಲೆಯು ಮುಂದೆ ಮಗುವಿಗೆ ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿಗೆ ನೆರವಾಗಲಿದೆ.
ಮೊದಲು ಜನನ ಮರಣ ಪ್ರಮಾಣ ಪತ್ರ ವಿತರಣಾ ಹಕ್ಕು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿತ್ತು. ಮತ್ತು ತಾಲೂಕು ಮತ್ತು ಪುರಸಭೆ ಅಥವಾ ಮಹಾನಗರ ಪಾಲಿಕೆ ಸಲ್ಲಿಸಬಹುದಾಗಿದ್ದು ಆದರೆ ಈಗ ಯಾವುದೇ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಆನ್‌ಲೈನ್ ಮೂಲಕವೇ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು. ಸೇವಾಸಿಂಧು ವೆಬ್ಸೈಟ್ ಮೂಲಕ ನಾವು ಕುಳಿತಲ್ಲಿಯೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಪಡೆಯಬಹುದಾಗಿದೆ.
ಅರ್ಜಿಸಲ್ಲಿಸಲು ಬೇಕಾದ ದಾಖಲಾತಿಗಳು
ತಂದೆ-ತಾಯಿಯ ಆಧಾರ್ ಕಾರ್ಡ್
ಹಾಸ್ಪಿಟಲ್ ಡಿಸ್ಚಾರ್ಜ್ ಸಮ್ಮರಿ ಅಥವಾ ಹಾಸ್ಪಿಟಲ್ ಸ್ಲಿಪ್
ಮಗುವಿನ ಹೆಸರು ಮತ್ತು ಡಿಟೇಲ್ಸ್
ಫಾರ್ಮ್ 1
ಡಿಕ್ಲರೇಷನ್ ಫಾರ್ಮ್
ಇಷ್ಟು ದಾಖಲಾತಿಗಳೊಂದಿಗೆ https://sevasindhu.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ
ಮುಖ್ಯವಾಗಿ ಮಗು ಜನಿಸಿದ 21 ದಿನದ ಒಳಗೆ ಇದನ್ನು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ನೀವು ಇಪ್ಪತ್ತೊಂದು ದಿನ ಮೇಲ್ಪಟ್ಟು ಅಂದರೆ ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ಮೇಲ್ಪಟ್ಟು ಮಾಡಿಸಿದ್ದಲಿ ನೀವು ದಂಡ ಕಟ್ಟ ಬೇಕಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಹೇಗೆ ಅರ್ಜಿ ಹಾಕಬೇಕೆಂದು ಎಂಬುವುದನ್ನು ತಿಳಿಯಲು ನಮ್ಮ ಯೂಟ್ಯೂಬ್ ಚಾನಲ್ Technical Tapasvi ಅನ್ನು ಸಂಪರ್ಕಿಸಿ
ಇದನ್ನು ಓದಿರಿ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ
0 ಕಾಮೆಂಟ್‌ಗಳು