ಅಂಬೇಡ್ಕರ್ ಅಭಿವೃದ್ಧಿ ನಿಗಮದ ಈ ವರ್ಷದ ಅದ್ಬುತವಾದ ಯೋಜನೆಗಳ ಪಟ್ಟಿ

    ಪ್ರತಿವರ್ಷದಂತೆ ಈ ವರ್ಷವೂ ಡಾ|| ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2021-22 ಆರ್ಥಿಕ ವರ್ಷದಲ್ಲಿ ಹಲವಾರು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಯೋಜನೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.


1. ಸ್ವಯಂ ಉದ್ಯೋಗ (ನೇರ ಸಾಲ) ಯೋಜನೆ :-

ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕ-ಯುವತಿಯರಿಗೆ ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ, ತಳ್ಳುವ ಗಾಡಿ ಘಟಕಗಳನ್ನು ಸ್ಥಾಪಿಸಲು ದುಡಿಮೆ ಬಂಡವಾಳ ಸೇರಿದಂತೆ ಮುಂತಾದ ಚಟುವಟಿಕೆಗಳಿಗೆ ಗರಿಷ್ಟ ಘಟಕ ವೆಚ್ಚ ರೂ. 50,000/- ದ ವರೆಗೆ ಶೇ. 50 ಸಾಲ ಮತ್ತು ಶೇ. 50 ಸಹಾಯಧನ ನೀಡಲಾಗುವುದು.

2. ಉದ್ಯಮ ಶೀಲತಾ ಯೋಜನೆ :-

ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯಡಿ ನಗರ ಪ್ರದೇಶದಲ್ಲಿ ವಾಸಿಸುವ ನಾಗರಿಕರಿಗೆ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮಳಿಗೆಗಳು ಮತ್ತು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಇತರ ಸ್ವಯಂ ಉದ್ಯೋಗಗಳ ಉದ್ದೇಶಕ್ಕಾಗಿ ಶೇಕಡ 70ರಷ್ಟು ಅಥವಾ ಗರಿಷ್ಠ ರೂ 1 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುವುದು.

3. ಗಂಗಾ ಕಲ್ಯಾಣ ಮತ್ತು ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ :-

ಗಂಗಾ ಕಲ್ಯಾಣ ಯೋಜನೆಯ ಹಲವಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಒಂದು ಯೋಜನೆಯಾಗಿದೆ ಯೋಜನೆಯಲ್ಲಿ 1.1/2 ಎಕರೆಯಿಂದ 5.00 ಎಕರೆವರೆಗೆ
ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿ ಅಳವಡಿಸಿ ವಿದ್ಯುತ್ ಸೌಲಭ್ಯವನ್ನು ಒದಗಿಸಿ ನೀರಾವರಿಯನ್ನು ಕಲ್ಪಿಸಲಾಗುತ್ತದೆ.
ವಿಶೇಷವಾಗಿ ಕೊಡಗು ದಕ್ಷಿಣ ಕನ್ನಡ ಉಡುಪಿ ಕಾರವಾರ ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ 1.00 ಎಕರೆ ಜಮೀನು ಹೊಂದಿದವರಿಗೂ ಸಹ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

4. ಮೈಕ್ರೋ ಕ್ರೆಡಿಟ್ ಸಾಲಸೌಲಭ್ಯ ಯೋಜನೆ :-

ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ ಮೈಕ್ರೋ ಕ್ರೆಡಿಟ್ ಸಾಲ ಯೋಜನೆಯನ್ನು ಜಾರಿಗೊಳಿಸಲಾಗಿದೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಅಂಬೇಡ್ಕರ್ ನಿಗಮದಿಂದ ಸಹಾಯಧನ ಮತ್ತು ಸಾಲ ನೀಡಲು ಅವಕಾಶ ಮಾಡಿಕೊಡಲಾಗುತ್ತದೆ.

ಈ ಎಲ್ಲಾ ಯೋಜನೆಯ ಸೌಲಭ್ಯವನ್ನು ಪಡೆಯಲು ಬೇಕಾದ ಅರ್ಹತೆಗಳು

ಈ ಎಲ್ಲಾ ಯೋಜನೆಯ ಸೌಲಭ್ಯವನ್ನು ಪಡೆಯಲು ಬೇಕಾದ ಅರ್ಹತೆಗಳು

18-60 ವರ್ಷದೊಳಗಿನ ಅರ್ಜಿದಾರರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ಕುಟುಂಬದ ಯಾವುದೇ ಸದಸ್ಯರು ಸರಕಾರಿ ಅಥವಾ ಇತರ ಯಾವುದೇ ಸಂಸ್ಥೆಯಲ್ಲಿ ನೌಕರಿಯಲ್ಲಿ 

ಇರಬಾರದು

ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು 81,000/- ಗ್ರಾಮೀಣ ಭಾಗದಲ್ಲಿ ಮತ್ತು 1,03,000/- ನಗರ ಭಾಗದಲ್ಲಿ

ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಸಣ್ಣ ಮತ್ತು ಅತಿ ಸಣ್ಣ ಇತರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :-

ಪಾಸ್ಪೋರ್ಟ್ ಸೈಜ್ ನ ಭಾವಚಿತ್ರ
ಪರಿಶಿಷ್ಟ ಜಾತಿ ಪ್ರಮಾಣ
ವಾರ್ಷಿಕ ಆದಾಯ ಪತ್ರ
ಪಡಿತರ ಚೀಟಿ
ಆಧಾರ್ ಕಾರ್ಡ್
ಯೋಜನಾ ವರದಿ

ಹೆಚ್ಚಿನ ಮಾಹಿತಿಗಾಗಿ

ನಿಮ್ಮ ತಾಲೂಕು ಅಥವಾ ಜಿಲ್ಲೆಯಲ್ಲಿರುವ ಅಂಬೇಡ್ಕರ್ ನಿಗಮ ಮಂಡಳಿಯ ಕಚೇರಿಯನ್ನು ಸಂಪರ್ಕಿಸಿ

ಮುಖ್ಯ ಕಚೇರಿಯ ವಿಳಾಸ
ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
9 ಮತ್ತು 10 ನೇ ಮಹಡಿ ವಿಶ್ವೇಶ್ವರಯ್ಯ ಚಿಕ್ಕ ಗೋಪುರ ಬೆಂಗಳೂರು 560001
ದೂರವಾಣಿ - 08022868870

ವೆಬೆ ಸೈಟ್‌ ಲಿಂಕ್‌ :- http://adcl.karnataka.gov.in

ಇದನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ : ಸುಕನ್ಯಾ ಸಮೃದ್ಧಿ ಯೋಜನೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು