ರೈತರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶಿಷ್ಯವೇತನ ಯೋಜನೆ
ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆ ಜಾರಿಗೆ ತಂದಿರುವ ಬಗ್ಗೆ 28-7-2021 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಗಿತ್ತು ಅದರಂತೆ ರೈತ ಮಕ್ಕಳ ಹೆಚ್ಚಿನ ಉನ್ನತ ಶಿಕ್ಷಣಕ್ಕೆ ಒತ್ತು ಕೊಡಲು ಮತ್ತು ಪ್ರೋತ್ಸಾಹಿಸಲು ಒಂದು ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚದಲ್ಲಿ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲು ಸಚಿವ ಸಂಪುಟ ನಿರ್ಧರಿಸುತ್ತದೆ.
SSLC ಅಥವಾ 10 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಇರುವ ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆಯುವ ಕರ್ನಾಟಕ ರಾಜ್ಯದ ರೈತರ ಮಕ್ಕಳ ಬ್ಯಾಂಕ್ ಖಾತೆಗೆ ವರ್ಗಾವಣೆ ಪದ್ಧತಿಯ ಮೂಲಕ 2021 - 22ನೇ ವರ್ಷದಿಂದ ಜಾರಿಗೆ ಬರುವಂತೆ ಮುಂದಿನ ಪಟ್ಟಿಯಲ್ಲಿ ವಿವರಿಸುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರ ಅನುಮೋದನೆ ನೀಡಲಾಗಿದೆ.
ಪಿಯುಸಿ , ಹುಡುಗರು/ಪುರುಷರು 2500/-ರೂ ಹುಡುಗಿಯರು/ ಅನ್ಯಲಿಂಗದವರು 3000/-
ಐ.ಟಿ.ಐ/ ಡಿಪ್ಲೊಮಾ
ಎಲ್ಲಾ ಬಿ.ಎ/ ಬಿ.ಎಸ್.ಸಿ/ ಬಿ.ಕಾಂ, ಇತ್ಯಾದಿ ಹುಡುಗರು/ಪುರುಷರು ರೂ 5000/- ಹುಡುಗಿಯರು/ ಅನ್ಯಲಿಂಗದವರು ರೂ.5500/-
ಎಂ.ಬಿ.ಬಿ.ಎಸ್/ ಬಿ. ಇ/ ಬಿ .ಟೆಕ್ ಮತ್ತು.
ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ.
ಎಲ್ .ಎಲ್. ಬಿ/ ಪ್ಯಾರ ಮೆಡಿಕಲ್/ ಹುಡುಗರು/ಪುರುಷರು ಹುಡುಗಿಯರು/ ಅನ್ಯಲಿಂಗದವರು ರೂ.8000/-
ಬಿ. ಫಾರ್ಮ್/ ನರ್ಸಿಂಗ್
ಇತ್ಯಾದಿ ವೃತ್ತಿಪರ ಕೋರ್ಸ್ ಗಳು.
ಎಂ.ಬಿ.ಬಿ.ಎಸ್/ ಬಿ. ಇ./ ಬಿ .ಟೆಕ್ ರೂ.10,000/- ರೂ.11000/-
ಮತ್ತು ಎಲ್ಲಾ ಸ್ನಾತಕೋತ್ತರ
ಕೋರ್ಸ್ ಗಳು.
ಈ ಶಿಷ್ಯವೇತನಕ್ಕೆ ಈ ಕೆಳಕಂಡ ಅರ್ಹತೆಗಳನ್ನು ತಿಳಿಯ ತಕ್ಕದ್ದು :-
(ಅ) ರೈತ ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಹೊಳೆ ಮಾಡುವಂತಹ ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿ;
(ಆ) ಮಕ್ಕಳು, ಎಂದರೆ ಕಾನೂನಿನ ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿದಂತೆ ಪೋಷಕ /ಪೋಷಕರ ಜೈವಿಕ ಸಂತತಿ .ಒಂದು ಪಕ್ಷ ಯಾವುದೇ ಮಕ್ಕಳಿಗೆ ಪೋಷಕರು ಇಲ್ಲದಿದ್ದ ಸಂದರ್ಭದಲ್ಲಿ ಮಾಡುವಂತಹ ಕೃಷಿ ಮಾಡುವಂತಹ ಜಮೀನನ್ನು ಅವರು ಹೊಂದಿರತಕ್ಕದ್ದು ಅವರುಗಳಿಗೆ ಅನುಕೂಲವಾಗುತ್ತದೆ.
ಈ ಶಿಷ್ಯ ವೇತನವು ಕೆಲವು ಶರತ್ತುಗಳನ್ನು ಒಳಗೊಂಡಿರುತ್ತದೆ.
1. ಈ ರೈತ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತೆ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ ಅಂದರೆ ಮೆರಿಟ್, ಅರ್ಹತಾ ಪರೀಕ್ಷೆ , ಶೈಕ್ಷಣಿಕ ಪರೀಕ್ಷೆಯಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ ಪ್ರಶಸ್ತಿ ಪ್ರತಿಫಲ ಇವುಗಳನ್ನು ರೈತಮಕ್ಕಳು ಪಡೆದಿದ್ದರು ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
2. ರೈತ ಮಕ್ಕಳ ತಂದೆ - ತಾಯಿ ಇಬ್ಬರು ಕೃಷಿ ಜಮೀನಿನ ಒಡೆಯರಾಗಿದ್ದರು ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ.
3. ಈ ಶಿಷ್ಯ ವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಸ್ಟರ್ / ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು ಕೋರ್ಸ್ ನ ಸೆಮಿಸ್ಟರ್ ನಲ್ಲಿ/ ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ ಪುನ: ಆ ಸೆಮಿಸ್ಟರ್ / ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೆ ವಿದ್ಯಾರ್ಥಿಗಳು ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
4. ಈ ವೇತನವನ್ನು ಯಾವುದಾದರೂ ಒಂದು ವಿವಿಧ ಕೋರ್ಸ್ ಗೆ ನೀಡಲಾಗುವುದು.
ಉದಾರಣೆಗೆ, "x ಎಂಬ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ನಂತರ y ಎಂಬ ಸ್ನಾತಕೋತ್ತರ ಕೋರ್ಸ್ ಗೆ ವಿದ್ಯಾರ್ಥಿಯ ಪ್ರವೇಶ ಪಡೆದಲ್ಲಿ, ಈ ಕೋರ್ಸ್ಗೆ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ".
ಈ ಆದೇಶ 28-7-21 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಸಾರ ಮತ್ತು ಆರ್ಥಿಕ ಇಲಾಖೆಯು 6-8-21 ರಲ್ಲಿ ನೀಡಿರುವ ಸಹಮತಿಅನ್ವಯ ಹೊರಡಿಸಲಾಗಿದೆ ಈ ರೈತ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಎಲ್ಲಾ ರೈತರ ಮಕ್ಕಳು ಸದುಪಯೋಗಪಡಿಸಿಕೊಳ್ಳಿ.
1 ಕಾಮೆಂಟ್‌ಗಳು
Bro how ro apply for scholarship
ಪ್ರತ್ಯುತ್ತರಅಳಿಸಿ