ಕಾಬೂಲ್ನಲ್ಲಿ ಇರುವ ಅಘ್ಘಾನಿಸ್ತಾನದ ಅಧ್ಯಕ್ಷರ ಮನೆಯಿಂದ ಶೀಘ್ರದಲ್ಲೇ ಇಸ್ಲಾಮಿಕ್ ಎಮಿರೆಟ್ ಆಫ್ ಅಘ್ಘಾನಿಸ್ತಾನ ಘೋಷಣೆ ಮಾಡುವುದಾಗಿ ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. Taliban To declare islamic Emirate of Afghanistan President
- ಭಾನುವಾರ, ಏರ್ ಇಂಡಿಯಾ ವಿಮಾನವು 129 ಪ್ರಯಾಣಿಕರನ್ನು ಹೊತ್ತೊಯ್ದು ದೆಹಲಿಯಲ್ಲಿ ಇಳಿಯಿತು,
- ಭಾರತವು ತನ್ನ ದೂತಾವಾಸಗಳನ್ನು ಮುಚ್ಚಿದೆ ಮತ್ತು ವೀಸಾಗಳನ್ನು ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮಾತ್ರ ನೀಡಲಾಗುತ್ತಿದೆ.
ತಾಲಿಬಾನ್ ಬಂಡುಕೋರರು ದೇಶವನ್ನು ಆಕ್ರಮಿಸಿಕೊಳ್ಳಬಹುದು ಎನ್ನುವ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ತಾಲಿಬಾನ್ ಆಕ್ರಮಣಕಾರಿ ನಡೆಗೆ ಆತಂಕಗೊಂಡಿರುವ ಅಮೆರಿಕ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿ, ಅಧಿಕಾರಿ ವರ್ಗವನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನೆರವಾಗಲು ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೇನಾಪಡೆಗಳನ್ನು ಕಳುಹಿಸಿತ್ತು. ಇದೀಗ ತಾಲಿಬಾನ್ ಬಂಡುಕೋರರು ಕಾಬೂಲ್ ಪ್ರವೇಶಿಸುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ತನ್ನ ರಾಯಭಾರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಿದೆ. ಇನ್ನು 90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಕಳೆದ ವಾರವಷ್ಟೇ ಭವಿಷ್ಯ ನುಡಿದಿತ್ತು. ಅದರಂತೆ ತಾಲಿಬಾನ್ ಬಂಡುಕೋರರು ಆಘ್ಘಾನಿಸ್ತಾನವನ್ನು ವಶಕ್ಕೆ ಪಡೆದಿದಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಕ್ಷಿಪ್ರ ಬೆಳವಣಿಗೆಗಳ ನಡುವೆ, ತಾಲಿಬಾನ್ ಅಧಿಕಾರಿಯೊಬ್ಬರು ಭಾನುವಾರ (ಆಗಸ್ಟ್ 15) ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಅನ್ನು ರಾಜಧಾನಿ ಕಾಬೂಲ್‌ನ ಅಧ್ಯಕ್ಷರ ಅರಮನೆಯಿಂದ ಘೋಷಿಸಲಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಮೊದಲು ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನವನ್ನು 'ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ' ಎಂದು ಕರೆಯಲಾಗುತ್ತಿತ್ತು. 1996 ರಿಂದ 2001 ರವರೆಗೆ ದೇಶವನ್ನು ಆಳಿದ ತಾಲಿಬಾನ್ ಅನ್ನು 9/11 ದಾಳಿಯ ನಂತರ ಯುಎಸ್ ನೇತೃತ್ವದ ಪಡೆಗಳು ಹೊರಹಾಕಿದವು.
0 ಕಾಮೆಂಟ್‌ಗಳು