ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರು ಇನ್ನು ಮುಂದೆ ಎಚ್ಚರ ಎಚ್ಚರ 6 ತಿಂಗಳುಗಳ ಕಾಲ ರೇಷನ್ ಕಾರ್ಡ್ ಅಮಾನತು ಮತ್ತು ದಂಡ
ಅನ್ನಭಾಗ್ಯ ಯೋಜನೆಯಡಿ ಸಿಗುವ ಆಹಾರಧಾನ್ಯವನ್ನು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟಮಾಡುವ ಫಲಾನುಭವಿಗಳ ಪಡಿತರ ಚೀಟಿ 6 ತಿಂಗಳು ಅಮಾನತು ಮಾಡಲಾಗುತ್ತದೆ ಅಕ್ರಮವಾಗಿ ಪಡಿತರ ಆಹಾರಧಾನ್ಯ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಉಚಿತವಾಗಿ ಹಂಚಿಕೆಯಾಗುವ ಹಕ್ಕಿಯನ್ನು ಫಲಾನುಭವಿಗಳು ಹಣಕ್ಕೆ ಮಾರುತ್ತಿರುವ ಪ್ರಕರಣಗಳು ಇಲಾಖೆಯ ಗಮನಕ್ಕೆ ಬಂದಿದೆ ಹೀಗಾಗಿ ಅಕ್ಕಿ ಮಾರಾಟ ಮಾಡಿ ಸಿಕ್ಕಿಬೀಳುವ ಪಲಾನುಭವಿಯ ಪಡಿತರ ಚೀಟಿ ಮತ್ತು 6 ತಿಂಗಳು ರೇಷನ್ ಕಾರ್ಡ್ ಅನ್ನು ಅಮಾನತ್ತು ಮಾಡಿ ಹಾಗೂ ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ದಂಡ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಇಲಾಖೆಯ ಆದೇಶದಲ್ಲಿ ಎಚ್ಚರಿಕೆ ನೀಡಿದೆ.
ಕೇಂದ್ರವು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಅಕ್ಕಿಗೆ 30 ರೂ.ನಂತೆ ಖರೀದಿಸಿ ರಾಜ್ಯ 3 ರೂ.ಗೆ ಅಕ್ಕಿ ನೀಡುತ್ತಿದೆ. ಪ್ರತಿ ತಿಂಗಳು ರಾಜ್ಯಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡುತ್ತಿದೆ. ಹೀಗಾಗಿ , ಕೇಂದ್ರ ಸಹಕಾರದೊಂದಿಗೆ ಸರ್ಕಾರವು ಆಹಾರ ಧಾನ್ಯ ವಿತರಿಸುತ್ತಿದೆ . ರಾಜ್ಯದಲ್ಲಿ 1,17,01,012 BPL ಮತ್ತು 10,92,580 ಅಂತ್ಯೋದಯ ಹಾಗೂ 21,05,000 APL ಕಾರ್ಡ್ ಸೇರಿ ಒಟ್ಟು 1,48,98,592 ಕಾರ್ಡ್ ಗಳಿವೆ. ಪ್ರತಿ ತಿಂಗಳು 19,972 ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆ.ಜಿ ಗೋಧಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ .
ಇದನ್ನು ಓದಿರಿ : ಇ ಶ್ರಮ ಕಾರ್ಡ್ ಎಂದರೇನು ಮತ್ತು ಇ ಶ್ರಮ ಕಾರ್ಡ್ನ ಪ್ರಯೋಜನವೇನು?
0 ಕಾಮೆಂಟ್ಗಳು