ನಿರುದ್ಯೋಗಿಗಳಿಗೆ ಉದ್ಯೋಗ ಸ್ವಯಂ ಉದ್ಯೋಗ ಹೊಂದಲು ಒಂದು ಸುವರ್ಣ ಅವಕಾಶ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಪ್ರಾದೇಶಿಕ ತರಬೇತಿ ಕೇಂದ್ರ KSRTC JOBS
ಕ. ರಾ. ರ. ಸಾ. ನಿಗಮ ಪ್ರಾದೇಶಿಕ ತರಬೇತಿ ಕೇಂದ್ರ. ಸರ್ಕಾರದ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತವಾಗಿ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಿ ನಿರುದ್ಯೋಗಿಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ಮಾಡಲಾಗಿದೆ.
ವೃತ್ತಿ ಗಳ ವಿವರ ಮತ್ತು ಅವಧಿ
1. ಭಾರಿ ವಾಹನ ಚಾಲನಾ ತರಬೇತಿ :-ಅರ್ಹತೆ :- ಅ) SSLC ಉತ್ತೀರ್ಣ / ಅನುತ್ತೀರ್ಣ.
ಆ) ಲಘು ವಾಹನ ಚಾಲನಾ ಪರವಾನಗಿ ಪಡೆಯಲು 1 ವರ್ಷ ಪೂರ್ಣಗೊಂಡಿರ ಬೇಕು.
ಇ) ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಅವಧಿ :- 30 ದಿನಗಳು
2. ಲಘು ವಾಹನ ಚಾಲನಾ ತರಬೇತಿ :-
ಅರ್ಹತೆ :- ಅ) SSLC ಉತ್ತೀರ್ಣ / ಅನುತ್ತೀರ್ಣ.
ಆ) ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಅವಧಿ :- 30 ದಿನಗಳು
3. ತಾಂತ್ರಿಕ ವ್ಯಕ್ತಿಗಳು :-
ಅ) ಟೈರ್ ಫಿಟ್ಟರ್
ಆ) ಆಟೋ ಎಲೆಕ್ಟ್ರಿಷಿಯನ್
ಇ) ಆಟೋ ಮೆಕ್ಯಾನಿಕ್
ಈ) ಆಟೋ ವೆಲ್ಟರ್
ಅರ್ಹತೆ :- ಅ) SSLC ಉತ್ತೀರ್ಣ.
ಆ) ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಬೇಕಾದ ದಾಖಲೆಗಳು :-
1. ನಿಗದಿ ಪಡಿಸಲಾದ ವಿದ್ಯಾರ್ಥಿ ಅಂಕಪಟ್ಟಿ2. ಚಾಲ್ತಿ ಇರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ
3. ಉದ್ಯೋಗ ವಿನಿಮಯ ಕಚೇರಿಯಿಂದ ಪಡೆದ ನೋಂದಣಿ ಪತ್ರ ( employment card )
4. ಆಧಾರ್ ಕಾರ್ಡ್
5. ತರಬೇತಿ ಕೋಂ ಆನ್ಲೈನ್ ಮೂಲಕ ಸಲ್ಲಿಸಲಾದ ಅರ್ಜಿಯ ಪತ್ರ
6. ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 12
ಅರ್ಜಿ ಸಲ್ಲಿಸುವ ವಿಧಾನ :-
ಅರ್ಹ ಅರ್ಜಿಯನ್ನು ಆನ್ಲೈನ್ ಮೂಲಕ www.kaushalkar.com ರಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಥವಾ ಕಚೇರಿ ಅವಧಿಯಲ್ಲಿ ಈ ಕೆಳಕಂಡ ವಿಳಾಸದಲ್ಲಿ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಹಾಯ ನೀಡಲಾಗುವುದು.ತರಬೇತಿ ಅವಧಿಯಲ್ಲಿ ಹಾಜರಾತಿ ಕಡ್ಡಾಯವಾಗಿದ್ದು ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ನಿರುದ್ಯೋಗಿಗಳು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಓದಿರಿ : Pm-kisan ಸಮ್ಮಾನ್ ನಿಧಿ ಇನ್ನು ಮುಂದೆ 2,000 ದಿಂದ 4,000 ರೂ. ಗೆ ಹೆಚ್ಚಳ
0 ಕಾಮೆಂಟ್‌ಗಳು