ಸರಕಾರದ ಆದೇಶದ ಮೇರೆಗೆ ಇನ್ನು ಮುಂದೆ ಅನಾಥಾಶ್ರಮಗಳಲ್ಲಿ ಬರ್ತಡೇ ಸೆಲೆಬ್ರೇಶನ್ ಮಾಡಿಕೊಳ್ಳುವಂತಿಲ್ಲ.
ಸರ್ಕಾರಿ ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ( celebrities ಇತ್ಯಾದಿ..) ಹಾಗೂ ಅವರ ಮಕ್ಕಳ ಹುಟ್ಟುಹಬ್ಬದ ಆಚರಣೆಯನ್ನು ನಿಷೇಧಿಸಲಾಗಿದೆ.
ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳು ,celebrities ರಾಜಕೀಯ ಮುಖಂಡರು ಮಠಾಧೀಶರು ಇತ್ಯಾದಿ ಮತ್ತು ತಮ್ಮ ಅಥವಾ ತಮ್ಮ ಮಕ್ಕಳ ಜನ್ಮದಿನವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಆಚರಿಸುತ್ತಿರುವುದು ತಿಳಿದುಬಂದಿದೆ.
ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಾಗುವ ಮಕ್ಕಳು ಕಾನೂನು ಸಂಘಟನೆ ಸಂಘರ್ಷಕ್ಕೆ ಒಳಗಾದ ಮಕ್ಕಳು , ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ , ಬಾಲ್ಯ ವಿವಾಹಕ್ಕೆ ಒಳಗಾದ , ಅತ್ಯಾಚಾರಕ್ಕೆ ಒಳಗಾದ , ತಂದೆ - ತಾಯಿಯಿಂದ ತಿರಸ್ಕರಿಸಲ್ಪಟ್ಟ , ತಾಯಿ ಅಥವಾ ತಂದೆ ಇಲ್ಲದ , ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ ಇತ್ಯಾದಿ ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಬಾಲನ್ಯಾಯ ಮಂಡಳಿಗಳನ್ನು ದೇಶದ ಮೂಲಕ ಮಕ್ಕಳ ಪಾಲನೆ ಸಂಸ್ಥೆಗಳಿಗೆ ದಾಖಲು ಮಾಡಲಾಗುತ್ತದೆ . ಈ ಎಲ್ಲಾ ವರ್ಗದ ಮಕ್ಕಳು ಸಮಾಜದಿಂದ ವಂಚಿತರಾಗಿ ಮನನೊಂದವರಾಗಿರುವುದರಿಂದ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳ ಮನಸ್ಸಿಗೆ ಖುಷಿ ತರುವಂತಹ ಸೃಜನಶೀಲತೆಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳ ಮನಸ್ಸು ಸದೃಢ ಹಾಗೂ ಆಹ್ಲಾದಕರ ವಾಗುವಂತೆ ಉತ್ಸಾಹಿ ಸಬೇಕಾಗುತ್ತದೆ. ಏಕೆಂದರೆ ಖಾಸಗಿ ವ್ಯಕ್ತಿಗಳು ಸೆಲೆಬ್ರಿಟಿಸ್ ಗಣ್ಯವ್ಯಕ್ತಿಗಳು ಅವರ ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಇತ್ಯಾದಿ ಹಂಚುವ ಅದ್ದೂರಿ ಕಾರ್ಯಕ್ರಮಗಳು ಸಂಸ್ಥೆಯಲ್ಲಿ ಆಚರಿಸುವುದರಿಂದ ಮಕ್ಕಳ ಪಾಲಿನ ಸಂಸ್ಥೆಯ ಮಕ್ಕಳಿಗೆ ಅವರ ಹುಟ್ಟುಹಬ್ಬ ಈ ರೀತಿ ಆಚರಿಸಲು ಸಾಧ್ಯವಾಗದೆ ಆಚರಿಸಲ್ಪಡುತ್ತಿರುವ ಹುಟ್ಟುಹಬ್ಬದ ಹೋಲಿಕೆ ಮಾಡಿಕೊಂಡಳು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ, ಮನಸ್ಸಿಗೆ ಆಗಾಧವಾಗಿ ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಾಗುತ್ತದೆ ಇಂತಹ ಆಚರಣೆಗಳು ಸದರಿ ಮಕ್ಕಳ ಸ್ವಾಭಿಮಾನ ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ .
ಸದರಿ ಮಕ್ಕಳು ಕುಟುಂಬಗಳಲ್ಲಿ ಬೆಳೆಯುವ ಬೇರೆ ಯಾವುದೇ ಮಗುವಿಗಿಂತ ಕಡಿಮೆ ಇಲ್ಲ ಎಂಬ ಭಾವನೆಗಳು ಕಾಪಾಡುವ ಸಲುವಾಗಿ ಮಕ್ಕಳ ಹುಟ್ಟುಹಬ್ಬ ಹಾಗೂ ಸರ್ಕಾರದ ಆದೇಶದ ಮೂಲಕ ನಿಗದಿಪಡಿಸಿದ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆ ಗಳನ್ನು ಹೊರತುಪಡಿಸಿ ಮಕ್ಕಳ ಪಾಲನೆ ಸಂಸ್ಥೆಗಳಲ್ಲಿ ಬೇರೆ ಯಾವ ಹುಟ್ಟುಹಬ್ಬ ಆಚರಿಸುವುದನ್ನು ಈ ಮೂಲಕ ನಿಷೇಧಿಸಿದೆ.
ಮಾಹಿತಿಗಾಗಿ ಓದಿರಿ : ಅನ್ನಪೂರ್ಣಿ ಅಕ್ಕಿ ಎಟಿಎಂ ಧಾನ್ಯ ವಿತರಕ ಯೋಜನೆ 2021
0 ಕಾಮೆಂಟ್‌ಗಳು