ಇನ್ನು ಮುಂದೆ ಮನೆಬಾಗಿಲಿಗೆ ಆಟೋದಲ್ಲಿ ಬರುತ್ತೆ ಪಡಿತರ

 ಇನ್ನು ಮುಂದೆ ಮನೆಬಾಗಿಲಿಗೆ ಆಟೋದಲ್ಲಿ ಬರುತ್ತೆ ಪಡಿತರ

ಆಯಾ ನ್ಯಾಯಬೆಲೆ ಅಂಗಡಿಗಳಿಂದ ಲಗೇಜ್ ಆಟೋ ಮೂಲಕ ಪಡಿತರ ಸಾಗಾಟ.


ಮನೆಮನೆಗೆ ಹೋಗಿ ಪಡಿತರ ವಿತರಿಸಲು ಇಬ್ಬರು ಸಿಬ್ಬಂದಿ ನೇಮಕ.

ಆಟೋದಲ್ಲೇ ತೂಕದ ಯಂತ್ರದ ಸೌಲಭ್ಯ.
ಅನುಕೂಲಗಳೇನು?


2-3 ಕಿ. ಮೀ. ದೂರ ಹೋಗಿ ಪಡಿತರ ಪಡೆಯುವ ಕಾರ್ಡ್ ದಾರರು ಇನ್ನು ಮುಂದೆ ನೀರಳ.

ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕಾರ್ಡುದಾರರು ಭಯಪಡಬೇಕಾಗಿಲ್ಲ.

ರೇಷನ್ ಪಡೆಯಲು ಆ ದಿನದ ಕೆಲಸ ಬಿಟ್ಟು ತಾಸುಗಟ್ಟಲೇ ಕ್ಯೂ ನಿಲ್ಲಬೇಕಾಗಿಲ್ಲ.

ಅಂಗವಿಕಲರಿಗೆ ಸಹಾಯ, ಅನಾಧಿಕೃತ ಪಡಿತರ ಕಾರ್ಡ್ ರೇಷನ್ ವಿತರಣೆ ತಡೆ.

ನ್ಯಾಯಬೆಲೆ ಅಂಗಡಿಗಳ ಮಾಲೀಕರು ದಬ್ಬಾಳಿಕೆಗೆ ಕಡಿವಾಣ ಬೀಳಲಿದೆ.

ಸಮರ್ಪಕವಾಗಿ ರೇಷನ್ ಹಂಚಿಕೆ, ಮೋಸ ಮಾಡಿದರೆ ಸಿಕ್ಕಿ ಬೀಳುವುದು ಗ್ಯಾರಂಟಿ.


ಸಿಬ್ಬಂದಿ ನೇಮಕದ ಮೂಲಕ ಹಲವು ನಿರುದ್ಯೋಗಿಗಳಿಗೆ ಉದ್ಯೋಗ.

ತೂಕದಲ್ಲಿ ಮೋಸ ,ಹಣ ವಸೂಲಿ, ಕಿರುಕುಳ ಪ್ರಕರಣಗಳಿಗೂ  ಕಡಿವಾಣ.

ಅನ್ನಭಾಗ್ಯ ಯೋಜನೆಯಡಿ ಕಾರ್ಡುದಾರರು ಪಡಿತರ ಪಡೆಯಲು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ ಆಂಧ್ರಪದೇಶದ ಮಾದರಿಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕಾರ್ಡ್ ದಾರರ ಮನೆಗೆ ಲಗೇಜ್ ಆಟೋ ಕಳುಹಿಸಿ ರೇಷನ್ ತಲುಪಿಸುತ್ತವೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ ಯೋಜನೆ ಬಗ್ಗೆ ಆಹಾರ ಇಲಾಖೆ ಅಧ್ಯಯನ ನಡೆಸುತ್ತಿದ್ದು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಯೋಜನೆಗಳ ಬಗ್ಗೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಸಭೆ ನಡೆಸಿ ನಡೆದಿದ್ದು ಮುಂದಿನ ನಾಲ್ಕೈದು ದಿನಗಳಲ್ಲಿ ಸಚಿವರ ಮಟ್ಟದಲ್ಲಿ ಮತ್ತೊಂದು ಸುತ್ತಿನ ಸಭೆ ನಿಗದಿಯಾಗಲಿದೆ.

ಆಂಧ್ರದಲ್ಲೇನಿದ್ದೆ ?


ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿನ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿಗಳಿಂದ ಲಗೇಜ್ ಆಟೋದಲ್ಲಿ ಪಡಿತರ ಪದಾರ್ಥಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಪ್ರತಿ ಲಗೇಜ್ ಆಟೋ ಕೆ ಇಬ್ಬರು ಸಿಬ್ಬಂದಿಯಿದ್ದು , ಇದರಲ್ಲಿ ಒಬ್ಬ ಸಿಬ್ಬಂದಿ ಸರ್ಕಾರದಿಂದಲೇ ನೇಮಕವಾಗುತ್ತಾರೆ , ವಾಹನಗಳಲ್ಲಿ ತೂಕದ ಯಂತ್ರ ಅಳವಡಿಸಿದ್ದು ಸ್ಥಳದಲ್ಲಿ ಪಡಿತರ ವಿತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಜಾರಿ ಬಗ್ಗೆ ಈಚೆಗೆ ಮಾತನಾಡಿದ್ದಾರೆ.

ಈ ಅನುಕೂಲಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.


ಇದನ್ನು ಓದಿರಿ : 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು