ಉದ್ಯೋಗದ ಆಫರ್‌ ಗಳು ನಿಮ್ಮ ಮೊಬೈಲ್‌ ಗೆ ಬರುತ್ತವೆ. ಎಚ್ಚರಿಕೆಯಿಂದ ಇರಿ ... !! Fake Job news

ವೆಬ್ ಗೆ ಲಾಗಿನ್ ಆದಾಗ ನಿಮ್ಮ ಕಣ್ಣ ಮುಂದೆ ಉದ್ಯೋಗದ ಹಲವು  ಆಫರ್ ಗಳು ಬರುತ್ತವೆ. ಎಚ್ಚರಿಕೆವಯಿಸಿ. 

Fake Jobs News


1. ನೀವು ಗೂಗಲ್ ನಲ್ಲಿ ಜಾಬ್ ಗಾಗಿ ಹುಡುಕಾಟ ನಡೆಸುವುದರಿಂದ ನೀವು ಯಾವುದೇ ವೆಬ್ ಗೆ ಹೋದರು ಉದ್ಯೋಗದ ಆಫರ್ ನೀಡುವ ಜಾಹೀರಾತುಗಳು ಕಾಣಿಸುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸರಿಯಾಗಿರುವುದಿಲ್ಲ.

2. ಇತ್ತೀಚೆಗೆ ಉದ್ಯೋಗ ಅಕಾಂಕ್ಷಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಫೇಕ್ ವೆಬ್ ಗಳು, ವಂಚಕ ಜಾಲಗಳು ಸಕ್ರಿಯವಾಗಿದೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಮಾಡಲಾಗುತ್ತದೆ. ದೊಡ್ಡ ಕಂಪನಿಗಳ ಹೆಸರಿನಲ್ಲಿಯೇ ವೆಬ್ ಗಳನ್ನು ತೆರೆದು ವಂಚಿಸಿದ ಪ್ರಕರಣಗಳಿವೆ. ಈ ಬಗ್ಗೆ ಎಚ್ಚರಿಕೆಯಿಂದಿರಿ.

3.  ಈ ರೀತಿ ವಂಚಕರ ತಾಣಗಳಲ್ಲಿ ಉದ್ಯೋಗಾ ಅವಕಾಶಕ್ಕೆ ಪ್ರಯತ್ನಿಸಿದಾಗ ಆನ್ ಲೈನ್ ಇಂಟರ್ ವ್ಯೂ ಶುಲ್ಕವೆಂದೋ, ರಿಜಿಸ್ಟ್ರೇಷನ್ ಶುಲ್ಕವೆಂದೋ ಇಂತಹ ವಂಚಕರು ಹಣ ಪೀಕಿಸುತ್ತಾರೆ. ಇದರಿಂದ ಯಾವುದು ಫೇಕ್ ಎಂಬುದು ಸುಲಭವಾಗಿ ತಿಳಿಯುತ್ತದೆ.

4.  ಒಮ್ಮೆ ನೀವು ವಂಚಕರ ಬಲೆಗೆ ಬಿದ್ದರೆ ಅವರು ಹಲವು ರೀತಿಯಲ್ಲಿ ನಿಮಗೆ ಸುಳ್ಳು ಮಾಹಿತಿಗಳನ್ನು ನೀಡಿ ನಿಮ್ಮನ್ನು ಮತ್ತೆ ಮತ್ತೆ ವಂಚಿಸಬಹುದು .


5.  ಕೆಲವು ವಂಚಕರು ನಿಮಗೆ ಜೊಬ್ ಆಫರ್ ಲೆಟರ್ ಸಹ ನೀಡುತ್ತಾರೆ, ಅವುಗಳನ್ನು ತೆಗೆದುಕೊಂಡು ಒರಿಜಿನಲ್ ಕಂಪನಿಗೆ ಹೋದರೆ ಮೋಸ ಹೋಗಿರುವುದು ಗೊತ್ತಾಗುತ್ತದೆ.

6.  ಈ ರೀತಿ ವಂಚನೆ ಕಂಪ್ಯೂಟರ್ ನಲ್ಲಿ ಮಾತ್ರವಲ್ಲ ಮೊಬೈಲ್ ನಲ್ಲಿರುವ ಹೆಚ್ಚಾಗುತ್ತದೆ. ಅಲ್ಲಿ ಯಾವುದೋ ಮೂಲಕವೂ ಉದ್ಯೋಗ ವಂಚಕರು ನಿಮ್ಮನ್ನು ಆಕರ್ಷಿಸಿ ಮೋಸ ಮಾಡಬಹುದು.

7. ಯಾವುದೇ ಉದ್ಯೋಗದ ಆಮೀಷವೊಡ್ಡಿ ಕಳುಹಿಸಲಾಗುವ ಲಿಂಕ್ ಗಳನ್ನು  ಕ್ಲಿಕ್ ಮಾಡುವ ಮೊದಲು ಎಚ್ಚರಿಕೆಯಿಂದಿರಿ. ತಜ್ಞರಿಂದ ಸರಿಯಾದ ಮಾಹಿತಿ ಪಡೆಯದೆ ಮುಂದುವರಿಯದಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು