ಹಿಜಾಬ್ ಧರಿಸುವ ವಿವಾದದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆ ಕಲಂ 144 ರೀತ್ಯಾ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ರಾಜ್ಯಾದ್ಯಂತ ಎಲ್ಲಾ ಪದವಿ ಪೂರ್ವ ಪದವಿ ಕಾಲೇಜುಗಳ ಆರಂಭಕ್ಕೆ ಸರ್ಕಾರವು ಆದೇಶ ನೀಡಿದ್ದು ಪ್ರಸ್ತುತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಿನಾಂಕ 16-2-22 ಸಂಜೆ 6 ಗಂಟೆಯಿಂದ ದಿನಾಂಕ 23-2-22 ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಪ್ರಾಥಮಿಕ ಪ್ರೌಢಶಾಲೆ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಸುತ್ತಮುತ್ತ 200 ಮೀಟರ್ ಪ್ರದೇಶದಲ್ಲಿ ಪ್ರಕ್ರಿಯೆ ಸಂಹಿತೆ ಜಾರಿಗೊಳಿಸಿದೆ
ನಿಷೇಧಿತ ಪ್ರದೇಶ ಮತ್ತು ಅವಧಿಯಲ್ಲಿ ವಿಧಿಸಿರುವ ನಿರ್ಬಂಧನೆಗಳು
1. ನಿಷೇಧಿತ ಪ್ರದೇಶ ಅವಧಿಯಲ್ಲಿ ಐದು ಜನ ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಗುಂಪಾಗಿ ಮಾಡುವುದನ್ನು ನಿಷೇಧಿಸಲಾಗಿದೆ.
2. ಯಾವುದೇ ವ್ಯಕ್ತಿಯು ಜಾತಿ ಧರ್ಮ ಕೋಮು ಪಂಥಗಳಿಗೆ ಸಾರ್ವಜನಿಕ ನೈತಿಕತೆಗೆ ಮಾದಕ ಉಂಟು ಮಾಡಬಹುದಾದಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ
3. ಸರ್ಕಾರಿ ವ್ಯವಸ್ಥೆಗಳು ಸಂಘಟನೆಗಳು ಕಾರ್ಯನಿರತ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಅವಹೇಳನಕಾರಿ ಅಂತಹ ಯಾವುದೇ ಘೋಷಣೆಗಳು ಭಾಷಣಗಳು ಪ್ರಚೋದನಕಾರಿ ಭಾಷಣ ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ
4. ಶಸ್ತ್ರಗಳು ದೊಣ್ಣೆಗಳು ಕಥೆಗಳು ಈಟಿಗಳು ಕಥೆಗಳು ಗದೆಗಳು ಬಂದೂಕುಗಳು ಚಾಕುಗಳು ಕೋಲುಗಳು ಅಥವಾ ಲಾಠಿಗಳನ್ನು ಉಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ವೈಯುವುದನ್ನು ನಿಷೇಧಿಸಲಾಗಿದೆ
5. ಪಟಾಕಿ ಸಿಡಿಮದ್ದುಗಳು ಸಿಡಿಸುವುದು ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಗಳನ್ನು ವೈಯುವುದನ್ನು ನಿಷೇಧಿಸಲಾಗಿದೆ
6. ಯಾವುದೇ ರೀತಿಯ ಪ್ರತಿಭಟನೆ ವಿಜಯೋತ್ಸವ ರ್ಯಾಲಿ ಸಾರ್ವಜನಿಕ ಮೆರವಣಿಗೆ ಸಾರ್ವಜನಿಕ ರಾಜಕೀಯ ಸಭೆ-ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ
7. ಕಲ್ಲು ಗಳು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಉಪಕರಣಗಳನ್ನು ಮತ್ತು ತಯಾರಿಸುವುದನ್ನು ನಿಷೇಧಿಸಲಾಗಿದೆ
8. ವ್ಯಕ್ತಿಗಳ ಅಥವಾ ಅವರ ಶವಗಳ ಅಥವಾ ಆಕೃತಿಗಳ ಅಥವಾ ಪ್ರತಿ ಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ
9. ನಿಷೇಧಿತ ಸ್ಥಳದಲ್ಲಿ ಎಲ್ಇಡಿ ಬಳಸಿ ಪ್ರದರ್ಶನ ನಡೆಸುವುದನ್ನು ಹಾಗೂ ಸಿಹಿ ಹಂಚಿಕೆ ಸಂಭ್ರಮಾಚರಣೆಯನ್ನು ಮಾಡುವುದನ್ನು ನಿಷೇಧಿಸಲಾಗಿದೆ
10. ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಿ ಬಹುದಾದ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬಾಧೆಯನ್ನುಂಟು ಮಾಡಬಹುದಾದ ರಾಜ್ಯದ ಕುಗ್ಗಿ ಸ ಅಥವಾ ಕಡೆಗಣಿಸಬಹುದು ಅಥವಾ ಅಪರಾಧವನ್ನು ಮಾಡುವ ಪ್ರಚೋದಿಸಬಹುದು ಬಹಿರಂಗ ಘೋಷಣೆಗಳನ್ನು ಕೂಗುವುದು ಹಾಡುಗಳನ್ನು ಹಾಡುವುದು ಸಂಗೀತವನ್ನು ಭಾಷಣ ಮಾಡುವುದು ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಉಪಯೋಗ ಮಾಡುವುದು ಮತ್ತು ಚಿತ್ರಗಳನ್ನು ಸಂಕೇತಗಳನ್ನು ಭಿತ್ತಿಪತ್ರಗಳನ್ನು ಅಥವಾ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು ಪ್ರದರ್ಶಿಸುವುದು ಮತ್ತು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ
11. ಮೇಲ್ಕಂಡ ನಿರ್ಬಂಧನೆಗಳು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಪ್ರದೇಶದಲ್ಲಿ ಕರ್ತವ್ಯನಿರತ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ
12. ಮೇಲ್ಕಂಡ ನಿರ್ಬಂಧನೆಗಳು ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮವಹಿಸುವ ವಹಿಸಲಾಗುವುದು
ಮಾಹಿತಿಗಾಗಿ ಓದಿರಿ : LLR ಪಡೆಯಲು ಇನ್ನು ಮುಂದೆ ಆರ್ ಟಿ ಓ ಗೆ ಹೋಗುವ ಅವಶ್ಯಕತೆ ಇಲ್ಲ Apply For Learners Licence (LLR) ?
0 ಕಾಮೆಂಟ್‌ಗಳು