ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ರೈತರು ಉಚಿತವಾಗಿ ಯಾವ ಯಾವ ದಾಖಲೆಯನ್ನು ಪಡೆಯ ಬಹುದು
ರೈತರಿಗೆ ಸಂತಸದ ಸುದ್ದಿ. ಯಾವ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳು ಬಂದಿಲ್ಲವೋ ಅಂತಹ ರೈತರು ಮಾರ್ಚ್ 21 ರಿಂದ ರಾಜ್ಯದ್ಯಾಂತ ಎಲ್ಲಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಕಂದಾಯ ದಾಖಲೆಗಳನ್ನು ಉಚಿತವಾಗಿ ಪಡೆಯಬಹುದು ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರ ಬಗ್ಗೆ ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ .
ರಾಜ್ಯ ಸರ್ಕಾರವು ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಈ ಯೋಜನೆಗೆ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಹೋಗಿ, ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಿದ್ದರು. ಆದರೆ ಇನ್ನೂ ಕೆಲವು ರೈತರಿಗೆ ಕಂದಾಯ ದಾಖಲೆಗಳು ಸಿಗದಿದ್ದರಿಂದ ಈಗ ರೈತರು ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿಯೇ ದಾಖಲೆಗಳನ್ನು ಪಡೆಯಲು ಸುತ್ತೋಲೆ ಹೊರಡಿಸಿದೆ.
ಉಚಿತವಾಗಿ ಕಂದಾಯ ದಾಖಲೆ ಪಡೆಯಲು ಯಾವ ಗುರುತಿನ ಚೀಟಿ ಇರಬೇಕು?
ರೈತರಿಗೆ ಕಂದಾಯ ದಾಖಳೆ ಉಚಿತವಾಗಿ ತಲುಪಿಸಿರುವ ಬಗ್ಗೆ ಖಾತರಿಗೆ ಆಧಾರ್ ಕಾರ್ಡ್ ಬಳಸಿ ಗುರುತಿಸಬೇಕು. ಆಧಾರ್ ಕಾರ್ಡ್ ಇಲ್ಲದಿದ್ದರೆ ಪಡಿತರ ಚೀಟಿ ಬಳಸಿ ಗುರುತಿಸಬೇಕು. ರೈತರ ಮೊಬೈಲ್ ಸಂಖ್ಯೆ ಲಭ್ಯವಿದ್ದರೆ ಸಂಗ್ರಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಕಂದಾಯ ದಾಖಲೆಗಳಾದ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು. ರಾಜ್ಯದ ರೈತ ಕುಟುಂಬಗಳಿಗೆ 4 ಕೋಟಿ ದಾಖಲೆ ವಿತರಿಸಲಾಗಿದೆ. ಮಾರ್ಚ್ 12 ಮತ್ತು 13 ರಂದು ರಾಜ್ಯ ಎಲ್ಲಾಜಿಲ್ಲೆಗಳಲ್ಲಿ 50 ಲಕ್ಷ ರೈತರಿಗೆ 5 ಕೋಟಿ ದಾಖಳೆಗಳನ್ನು ವಿತರಣೆ ಮಾಡಲಾಗಿದೆ.
ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ಯೋಜನೆಯಡಿ ಯಾವ ಯಾವ ರೈತರಿಗೆ ಕಂದಾಯ ದಾಖಲೆ ತಲುಪಿಲ್ಲವೋ ಅಂತಹ ರೈತರು ಮಾರ್ಚ್ 21 ರಿಂದ 27 ರ ಒಳಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತೆಗೆದುಕೊಂಡು ಹತ್ತಿರದ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಿಂದ ರೈತರು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಪದೇ ಪದೇ ಅಲೆದಾಡುವುದು ತಪ್ಪುತ್ತದೆ. ಕಂದಾಯ ದಾಖಲೆಗಳು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪುವುದರಿಂದ ರೈತರಿಗೆ ಸರ್ಕಾರದ ಖಾತ್ರಿಯೊಂದಿಗೆದಾಖಲೆಗಳು ಅಧಿಕೃತವಾಗಿ ಮತ್ತು ಸುಲಭವಾಗಿ ಕೈ ಸೇರಿ ಅನುಕೂಲವಾಗಲಿದೆ ಎಂದು ಕಂದಾಯ ದಾಖಲೆ ವಿತರಿಸಿ ರೈತರನ್ನುದ್ದೇಶಿಸಿ ಮಾತನಾಡಿದ್ದರು.
0 ಕಾಮೆಂಟ್‌ಗಳು