ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ಲಾಸ್ಟಿಕ್ ತಂತ್ರಜ್ಞಾನದ ಬಗ್ಗೆ 3 ತಿಂಗಳ ಉಚಿತ ತರಬೇತಿ free training for six months on Plastic Technology covering Plastic Processing
ಕರ್ನಾಟಕ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ 2021 22 ನೇ ಸಾಲಿಗೆ ಪ-ಜಾತಿ ಸೇರಿದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಮೈಸೂರಿನಲ್ಲಿರುವ ಭಾರತ ಸರ್ಕಾರದ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನದ ಸಂಸ್ಥೆಯಲ್ಲಿ ( ಸಿಐಪಿಇಟಿ ) ಉಚಿತ ಊಟ ವಸತಿಯೊಂದಿಗೆ ಪ್ಲಾಸ್ಟಿಕ್ ತಂತ್ರಜ್ಞಾನದ ಬಗ್ಗೆ 3 ತಿಂಗಳ ವಿವಿಧ ರೀತಿಯ ವೃತ್ತಿಪರ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದ್ದು. ತರಬೇತಿ ಅವಧಿಯಲ್ಲಿ ತಿಂಗಳಿಗೆ 2 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತದೆ. ಮೆಷನ್ ಆಪರೇಟರ್ ಅಸಿಸ್ಟೆಂಟ್ ಇಂಜೆಕ್ಷನ್ ಮೌಲ್ಡಿಂಗ್ ಮತ್ತು ಮಿಷಿನ್ ಆಪರೇಟರ್ ಅಸಿಸ್ಟೆಂಟ್ ಪ್ಲಾಸ್ಟಿಕ್ ಪ್ರಶಸ್ತಿಗಳ ಜೊತೆಗೆ ಬೇಸಿಕ್ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲಾಗುತ್ತದೆ.
ಅರ್ಹತೆಗಳು : -
ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಎಂಟನೇ ತರಗತಿ ಎಸ್ ಎಸ್ ಎಲ್ ಸಿ ಪಿಯುಸಿ ಪದವಿ ಅಥವಾ ಐಟಿಐ ಉತ್ತೀರ್ಣರಾಗಿರಬೇಕು.
ಬೇಕಾಗಿರುವ ದಾಖಲೆಗಳು :-
1. ತಮ್ಮ ವಿದ್ಯಾರ್ಹತೆಯೇ ಜನ್ಮದಿನಾಂಕದ ಪ್ರತಿ
2. ಗುರುತಿನ ಐಡಿ ಪ್ರೂಫ್
3. ಆಧಾರ್ ಕಾರ್ಡ್
4. ವೋಟರ್ ಐಡಿ
5. ರೇಷನ್ ಕಾರ್ಡ್
6. ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
7. ಆರು ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ
8. ಈ ಎಲ್ಲಾ ಮೂಲ ದಾಖಲೆಗಳು ಮತ್ತು ಒಂದು ಸೆಟ್ ಪ್ರತಿ
ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಮೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಮೈಸೂರ್ 437 / ಎ, ಹೆಬ್ಬಾಳ್, ಇಂಡಸ್ಟ್ರಿಯಲ್ ಏರಿಯಾ, ಮೈಸೂರ್ ನಲ್ಲಿ ಸಂದರ್ಶನಕ್ಕೆ ಭಾಗವಹಿಸಬೇಕು
ಹೆಚ್ಚಿನ ಮಾಹಿತಿಗಾಗಿ ದೂರವಾಣಿ:-
9380756024
9066648466
9845873498
0821-2510619
ಅನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಓದಿರಿ : ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ-2022 Labour card scholarship apply online - 2022
0 ಕಾಮೆಂಟ್‌ಗಳು