ಪಡಿತರ ಚೀಟಿ ಈ ಕಾರಣಗಳಿಂದ ರದ್ದಾಗ ಬಹುದು Ration card will be canceled in these four cases
ರೇಷನ್ ಕಾರ್ಡ್ ಹೊಂದಿದ್ದರೆ ಈ ಮಾಹಿತಿಯನ್ನು ತಪ್ಪದೆ ಓದಿ. ಕರೋನಾ ಮಹಾಮಾರಿಯ ಸಮಯದಲ್ಲಿ ಸರ್ಕಾರವು ಬಡವರಿಗೆ ಉಚಿತ ಪಡಿತರ ವ್ಯವಸ್ಥೆಯನ್ನು ಪ್ರಾರಂಭಿಸಿತ್ತು. ಆದರೆ ಕೊನೆಯ ದಿನಗಳಲ್ಲಿ ಸರಕಾರದಿಂದ ಸಿಗುವ ಉಚಿತ ಪಡಿತರದ ಲಾಭವನ್ನು ಲಕ್ಷಗಟ್ಟಲೆ ಅನರ್ಹರು ಸಹ ಪಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.
ಇದಕ್ಕಾಗಿ ಸರಕಾರ ಜನರಲ್ಲಿ ಮನವಿ ಮಾಡುತ್ತಿದ್ದು, ಅನರ್ಹರು ತಾವೇ ಖುದ್ದಾಗಿ ಪಡಿತರ ಚೀಟಿ ರದ್ದುಪಡಿಸಿಕೊಡಬೇಕು ಎಂದು ಹೇಳಿದೆ. ಪಡಿತರ ಚೀಟಿ ಒಂದು ವೇಳೆ ರದ್ದುಪಡಿಸದಿದ್ದರೆ ಪರಿಶೀಲನೆ ಬಳಿಕ ಆಹಾರ ಇಲಾಖೆಯ ತಂಡ ಅವುಗಳನ್ನು ರದ್ದುಪಡಿಸಿ ಅನರ್ಹರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಏನಿದು ಹೊಸ ನಿಯಮ ?
ಪಡಿತರ ಚೀಟಿ ಹೊಂದಿದವರ ಬಳಿ ಸ್ವಂತ ಆದಾಯದಿಂದ ಗಳಿಸಿದ 100 ಚದರ ಮೀಟರ್ ವಿಸ್ತೀರ್ಣದ ನಿವೇಶನ/ಫ್ಲಾಟ್ ಅಥವಾ ಮನೆ ಇದ್ದರೆ, ಅಥವಾ ನಾಲ್ಕು ಚಕ್ರ ವಾಹನ/ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ, ಕುಟುಂಬದ ಆದಾಯವು ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ವಾರ್ಷಿಕ ಮೂರು ಲಕ್ಷ ರೂ.ಗಿಂತ ಹೆಚ್ಚಾಗಿದ್ದರೆ, ಅಂತಹ ಜನರು ತಮ್ಮ ಪಡಿತರ ಚೀಟಿಯನ್ನು ತಹಸಿಲ್ ಮತ್ತು ಡಿಎಸ್ಒ ಕಚೇರಿಯಲ್ಲಿ ಸರೆಂಡರ್ ಮಾಡಬೇಕಾಗಲಿದೆ.
SSLC ಪರೀಕ್ಷೆ ಫಲಿತಾಂಶ 2022 SSLC Result 2022 date karnataka 10th Result
ಸರ್ಕಾರದ ನಿಯಮಗಳ ಪ್ರಕಾರ, ಅನರ್ಹ ಪಡಿತರ ಚೀಟಿದಾರರು ತಮ್ಮ ಕಾರ್ಡನ್ನು ಸರೆಂಡರ್ ಮಾಡದೆ ಹೋದಲ್ಲಿ, ಪರಿಶೀಲನೆಯ ಬಳಿಕ ಅಂತಹ ಜನರ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ಆ ಕುಟುಂಬದ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎನ್ನಲಾಗಿದೆ. ಅಷ್ಟೇ ಅಲ್ಲ ಅಂತಹವರಿಂದ ಅವರು ಪಡೆದ ಪಡಿತರವನ್ನೂ ಕೂಡ ವಸೂಲಿ ಮಾಡಲಾಗುವುದು ಎನ್ನಲಾಗಿದೆ.
ನಿಮ್ಮ ಪ್ರಶ್ನೆಗಳನ್ನು ಕಾಮೆಂಟ್ ಮಾಡಿ ತಿಳಿಸಿ . . . .
0 ಕಾಮೆಂಟ್‌ಗಳು