ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಹಲವು ಬದಲಾವಣೆ : ಹೊಸ ಕಡ್ಡಾಯ ನಿಯಮಗಳು ಹೀಗಿವೆ
ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಅಥವಾ ನವೀಕರಣ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ.ಹೊಸ ನಿಯಮಗಳ ಅನುಷ್ಠಾನದ ಬಳಿಕ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜುಲೈ 1, 2022 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ.
ಇನ್ನು ಚಾಲನಾ ಪರವಾನಗಿ ಪಡೆಯಲು, ಆರ್‌ಟಿಓನಲ್ಲಿ ಟೆಸ್ಟ್ ತೆಗೆದುಕೊಳ್ಳಲು ಕಾಯಬೇಕಾಗಿಲ್ಲ. ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಡಿಎಲ್‌ಗಾಗಿ ನೋಂದಾಯಿಸಿಕೊಳ್ಳಬಹುದು. ಇಲ್ಲಿಂದ ತರಬೇತಿ ಪಡೆದ ನಂತರ ಅಲ್ಲಿಂದಲೇ ಟೆಸ್ಟ್ ಪಾಸ್ ಮಾಡಬೇಕು. ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಡ್ರೈವಿಂಗ್ ಸ್ಕೂಲ್ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ ನಿಮ್ಮ ಡಿಎಲ್ ಮಾಡಲಾಗುತ್ತದೆ.
*ಹೊಸ ನಿಯಮಗಳೇನು..?*
ಚಾಲನಾ ಪರವಾನಗಿ ಹೊಸ ನಿಯಮಗಳು 2022 ಜುಲೈ 1 ರಿಂದ ಜಾರಿಗೆ ಬರಲಿದ್ದು, ರಾಜ್ಯ ಸಾರಿಗೆ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರವು ಖಾಸಗಿ ಚಾಲನಾ ಕೇಂದ್ರಗಳನ್ನು ಮಾತ್ರ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ತರಬೇತಿ ಕೇಂದ್ರಗಳು ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತವೆ. ಸರ್ಕಾರದ ಈ ಕ್ರಮವು ಖಾಸಗಿ ತರಬೇತಿ ಶಾಲೆಗಳು ಪ್ರತ್ಯೇಕ ಉದ್ಯಮವನ್ನೇ ಸೃಷ್ಟಿಸಲು ಕಾರಣವಾಗಬಹುದು ಎಂದು ಸಹ ಹೇಳಲಾಗಿದೆ.
*ಆರ್‌ಟಿಒ ಟೆಸ್ಟ್ ಕಡ್ಡಾಯವಲ್ಲ*
ಸದ್ಯ ಡ್ರೈವಿಂಗ್ ಸ್ಕೂಲ್ ಮೂಲಕ ಅಥವಾ ವೈಯುಕ್ತಿಕವಾಗಿ ಲೈಸೆನ್ಸ್‌ಗೆ ಅರ್ಜಿ ಹಾಕಿದರೆ, ಆರ್‌ಟಿಒ ಅಧಿಕಾರಗಳ ಮುಂದೆ ಡ್ರೈವಿಂಗ್ ಟೆಸ್ಟ್ ಮಾಡಬೇಕು. ಈ ಟೆಸ್ಟ್‌ನಲ್ಲಿ ಪಾಸ್ ಆದವರಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಹೊಸ ನಿಯಮದಡಿಯಲ್ಲಿ ಆರ್‌ಟಿಒ ಮುಂದೆ ಡ್ರೈವಿಂಗ್ ಟೆಸ್ಟ್ ನೀಡಬೇಕಾದ ಅಗತ್ಯವಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಡ್ರೈವಿಂಗ್ ಕೇಂದ್ರಗಳಲ್ಲಿ ಡ್ರೈವಿಂಗ್ ಪಾಸ್ ಮಾಡಿದರೆ ಸಾಕು. ಈ ಕೇಂದ್ರಗಳು ನೀಡುವ ಡ್ರೈವಿಂಗ್ ಸರ್ಟಿಫೀಕೆಟ್ ಆಧಾರದಲ್ಲಿ ಸಾರಿಗೆ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯಬಹುದು.
*ಡ್ರೈವಿಂಗ್ ಲೆಸೆನ್ಸ್‌ನಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಲೈಟ್ ಮೋಟಾರ್, ಗೇರ್, ವಿಥ್ ಗೇರ್ ಸೇರಿದಂತೆ ಹಲವು ವಿಭಾಗಗಳು ಇರಲಿವೆ.*
MC 50CC – 50 CC ಅಥವಾ ಅದಕ್ಕಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಮೋಟಾರ್‌ಸೈಕಲ್ ಲೈಸೆನ್ಸ್MC EX50CC – ಗೇರ್ ಹೊಂದಿರುವ LMVs ವಾಹನ ಹಾಗೂ 50CC ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಕಾರು ಅಥವಾ ಮೋಟಾರ್‌ಸೈಕಲ್MCWOG/FVG – ಗೇರ್ ಇಲ್ಲದ ಯಾವುದೇ ಸಾಮರ್ಥ್ಯದ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಲೈಸೆನ್ಸ್M/CYCL.WG – ಗೇರ್ ಹಾಗೂ ಗೇರ್ ಇಲ್ಲ ಎಲ್ಲಾ ಮೋಟಾರ್‌ಸೈಕಲ್
LMV-NT ಲೈಟ್ ಮೋಟಾರ್ ವಾಹನ(LMVs)ಇನ್ನು ವಾಣಿಜ್ಯ ವಾಹನಗಳ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಕೆಲ ಬದಲಾವಣೆಗಳಿದ್ದು, HMV, HGMV, HPMV/HTV , MGV, LMV – LMV ಹಾಗೂ trailer ಎಂದು ವರ್ಗೀಕರಿಸಲಾಗಿದೆ.
*ಈ ಡಾಕ್ಯುಮೆಂಟ್‌ಗಳು ಕಡ್ಡಾಯ*
ಹೊಸ ಪರವಾನಗಿ ನಿಯಮಗಳ ಅಡಿಯಲ್ಲಿ ಕೆಳಗಿನ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಿದ್ದು, ವಯಸ್ಸಿನ ಪುರಾವೆ – ಶೈಕ್ಷಣಿಕ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಅಥವಾ ಉದ್ಯೋಗದಾತರ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಇಲ್ಲವಾದಲ್ಲಿ ವಿಳಾಸ ಪುರಾವೆ – ರೇಷನ್ ಕಾರ್ಡ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದ, ಯುಟಿಲಿಟಿ ಬಿಲ್ ಅಥವಾ ಜೀವ ವಿಮಾ ಪಾಲಿಸಿ ಪ್ರಮಾಣಪತ್ರವನ್ನು ಕೂಡ ಪುರಾವೆಯಾಗಿ ನೀಡಬಹುದು.
*ರಸ್ತೆ ಮತ್ತು ಸಾರಿಗೆ ಸಚಿವಾಲಯವು ತರಬೇತಿ ಕೇಂದ್ರಗಳಿಗೆ ಕೆಲವು ಮಾರ್ಗಸೂಚಿಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಿದ್ದು ಅದು ಇಂತಿವೆ:*
1 :- ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಭೂಮಿ ಹೊಂದಿರಬೇಕು. ಭಾರೀ ಪ್ರಯಾಣಿಕ/ಸರಕು ವಾಹನಗಳು ಅಥವಾ ಟ್ರೇಲರ್‌ಗಳಿಗಾಗಿ ತರಬೇತಿ ಕೇಂದ್ರದ ಬಳಿ ಎರಡು ಎಕರೆ ಭೂಮಿಯನ್ನು ಹೊಂದಿರುವುದು ಅವಶ್ಯಕ.
2 :- ತರಬೇತುದಾರರು ಕನಿಷ್ಠ 12 ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು.
3 :- ಡ್ರೈವಿಂಗ್ ಸೆಂಟರ್‌ಗಳ ಪಠ್ಯಕ್ರಮವನ್ನು ಥಿಯರಿ ಮತ್ತು ಪ್ರಾಕ್ಟಿಕಲ್ ಎಂದು 2 ಭಾಗಗಳಾಗಿ ವಿಂಗಡಿಸಲಾಗಿದೆ.
4 :- ತರಬೇತಿ ಕೇಂದ್ರದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಹೊಂದಿರುವುದು ಅವಶ್ಯಕವಾಗಿದೆ.
5 :- ಕೋರ್ಸ್‌ನ ಅವಧಿಯು ಮಧ್ಯಮ ಮತ್ತು ಭಾರೀ ವಾಹನಗಳ ಮೋಟಾರು ವಾಹನಗಳಿಗೆ 6 ವಾರಗಳಲ್ಲಿ 38 ಗಂಟೆಗಳು. 8 ಗಂಟೆಗಳ ಥಿಯರಿ ತರಗತಿ ಮತ್ತು ಉಳಿದ 31 ಗಂಟೆಗಳ ಪ್ರಾಯೋಗಿಕ ತರಗತಿ ಇರುತ್ತದೆ.
0 ಕಾಮೆಂಟ್‌ಗಳು