ಕಾರ್ಮಿಕರಿಗೆ ಉಚಿತ ಬಸ್ ಪಾಸ್ : Labour card Bus Pass online application
ಕರ್ನಾಟಕ ಸರ್ಕಾರದ 2022-23 ನೇ ಸಾಲನ ಆಯವ್ಯಯದಲ್ಲಿ ಘೋಷಣೆ ಸಂಖ್ಯೆ 391 ರಲ್ಲಿ "ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲಾಗುವುದು" ಎಂದು ಘೋಷಿಸಿರುತ್ತಾರೆ. ಈ ಸಂಬಂಧ ಉಲ್ಲೇಖ-1 ರನ್ವಯ ಸರ್ಕಾರವು ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿರುತ್ತದೆ.
ಈ ಪಾಸು ವಿತರಣಾ ವ್ಯವಸ್ಥೆಯ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುತ್ತದೆ ಹಾಗೂ ತದನಂತರ ಜಾರಿಗೆ ಬರಲಿದೆ. ಈ ಯೋಜನೆಯಡಿ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ಮಾನ್ಯ ಮಾಡುವಲ್ಲಿ ಕೆಳಕಂಡ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ.
ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಇಡಿಸಿಎಸ್‌ರವರಿಂದ ವಿತರಣೆ ಮಾಡಲಾಗುವುದು. ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ವಿತರಣೆ ಮಾಡಲಿದೆ.
ಕಟ್ಟಡ ಕಾರ್ಮಿಕರ ಬಸ್ ಪಾಸ್ ಯೋಜನೆಯ ರೂಪರೇಷೆಗಳು:
1. ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಇಡಿಸಿಎಸ್ ರವರಿಂದ ವಿತರಣಿ ಮಾಡಲಾಗುವುದು.
2. ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ವಿತರಣೆ ಮಾಡಲು ಕ್ರಮವಹಿಸುತ್ತದೆ.
3. ಮಂಡಳಯ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೊಂದಣಿಯಾಗಿದ್ದರೂ ಸಹ ಅವರು ಇಚ್ಚಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ (ಕರಾರಸಾ ನಿಗಮ, ವಾಕರಸಾಸಂಸ್ಥೆ ಹಾಗೂ ಕಕರಸಾ ನಿಗಮಗಳ ವ್ಯಾಪ್ತಿಯಲ್ಲಿ) ಅಂದರೆ ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ (ಗರಿಷ್ಠ 45 ಕಿ.ಮೀ) ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.
Vikram
4. ಇಡಿಸಿಎಸ್ ಇಲಾಖೆಯ / ಸೇವಾಸಿಂಧು ಪೋರ್ಟಲ್‌ರವರು ರಾಜ್ಯಾದ್ಯಂತ ಕರ್ನಾಟಕ ಒನ್ /ಗ್ರಾಮಸೇವಾ ಒನ್ ಸೆಂಟರ್‌ಗಳ ಮೂಲಕ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರುಗಳಿಗೆಉಚಿತ ಬಸ್ ಪಾಸ್ ವಿತರಿಸಲು ಕ್ರಮವಹಿಸುತ್ತಾರೆ.
5. ಕರಾರಸಾನಿಗಮ, ವಾಕರಸಾಸಂಸ್ಥೆ ಹಾಗೂ ಕಕರಸಾನಿಗಮಗಳ ಲೋಗೋ / ಹೆಸರು ಇರುವ ಸ್ಮಾರ್ಟ್‌ಕಾರ್ಡ್ (With QR code) ಮಾದರಿಯ ಬಸ್‌ಪಾಸ್‌ಗಳನ್ನು ಸೇವಾಸಿಂಧುತಂತ್ರಾಂಶದ ಮೂಲಕ ವಿತರಣೆ ಮಾಡಲಾಗುವುದು. (ನಮೂನೆಯ ಮಾದರಿಯನ್ನು ಅಡಕಗೊಳಿಸಿದೆ).
0 ಕಾಮೆಂಟ್‌ಗಳು