ಡಿಜಿಟಲ್ ರುಪಿ ಎಂದರೆ ಏನು? Digital Rupee how to buy
ದಪದ ವಾಲೆಟ್, ಅದರ ತುಂಬಾ ನೋಟು. ಇದನ್ನು ಬಳಕೆ ಮಾಡಿ ವ್ಯವಹಾರನಡೀತಾ ಇದ್ದ ಕಾಲ ನೆನಪಿದ್ಯಾ? 2016ರಲ್ಲಿ ಯುಪಿಐ ಜಾರಿಗೆ ಬಂದ ಮೇಲೆ ಈ ರೀತಿ ದುಡ್ಡು ಹಿಡಿದುಕೊಂಡು ಓಡಾಡೋದು ಕಡಿಮೆಯಾಯ್ತು, ಈಗ ತರಕಾರಿ ಕೊಳ್ಳುವ ಕೈಗಾಡಿಯಿಂದ ಹಿಡಿದು, ಪೆಟ್ರೋಲ್ ತುಂಬಿಸುವವರೆಗೆ, ಆಟೋಗಳಿಂದ ಹಿಡಿದು ಮಾಲ್‌ಗಳ ವರೆಗೆ ಎಲ್ಲಾಕಡೆ ಯುಪಿಐನದೇ ಆಟ, ಕ್ಷಣಾರ್ಧದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಬಹುದು. ಈಗ ಭಾರತದ ರಿಸರ್ವ್ ಬ್ಯಾಂಕ್ ಡಿಜಿಟಲ್ ರುಪೀ(ಸಿಬಿಡಿಸಿ), ಅಥವಾ e-R ಅನ್ನು ಡಿ.1ರಿಂದ ಪ್ರಾಯೋಗಿಕವಾಗಿ ಜಾರಿಗೆತರುತ್ತಿದೆ.
ಇದು ಭಾರತೀಯ ರೂಪಾಯಿಯ ಡಿಜಿಟಲೀಕರಣದ ಮುಂದಿನ ಮಜಲು,
ಸರಳವಾಗಿ ಹೇಳುವುದಾದರೆ ಸಿಬಿಡಿಸಿ ಅ೦ದರೆ ಡಿಜಿಟಲ್ ರೂಪದಲ್ಲಿ ಇರುವ ಭಾರತೀಯ ಕರೆನ್ಸಿ, ಈ ಡಿಜಿಟಲ್ ರುಪಾಯಿಯ ಮೌಲ್ಯ ನಿಮ್ಮ ಕೈಯಲ್ಲಿರುವ ಅದೇ ಮೌಲ್ಯದ ನೋಟಿನ ಬೆಲೆಗೆ ಸಮಾನವಾಗಿರುತ್ತದೆ. ಅಂದ್ರೆ ನೀವು 10 ರೂಪಾಯಿಯ ಡಿಜಿಟಲ್ ರುಪೀ ಹೊಂದಿದರೆ 10 ರೂಪಾಯಿಯ ನೋಟ್ ಒಂದನ್ನು ಹೊಂದಿದಂತೆಯೇ, ಹಾಗಾದರೆ ಇದರಿಂದ ಆಗುವ ಉಪಯೋಗ ಏನು? ಈಗಾಗಲೇ ಯುಪಿಐ ಇರುವಾಗ ಇನ್ನೊಂದು
ಡಿಜಿಟಲ್ ಕರೆನ್ಸಿ ಯಾಕೆ ಬೇಕು?
ಮೊಟ್ಟಮೊದಲನೆಯದಾಗಿ ಯುಪಿಐನಲ್ಲಿ ದುಡ್ಡು ಕೊಡಲು ಮತ್ತು ಹೀಗೆ ಪಡೆಯಲು ನಿಮ್ಮ ಬಳಿಯಲ್ಲಿ ಒಂದು ಬ್ಯಾಂಕ್ ಅಕೌಂಟ್ ಬೇಕು ಮತ್ತು ಊರ್ಜಿತವಾಗಿಸುವುದು ಒಂದು ಬ್ಯಾಂಕ್, ಇಲ್ಲಿ ಒಂದು ಬ್ಯಾಂಕ್.
ಅಕೌಂಟಿನಿಂದ ಇನ್ನೊಂದು ಅಕೌಂಟಿಗೆ ದುಡ್ಡು ವರ್ಗಾವಣೆ ಆಗುತ್ತದೆ. ಇದರ ಅರ್ಥ ಹಲವಾರು ಬ್ಯಾಂಕುಗಳು ಇಲ್ಲಿ ಆಗುವ ಪ್ರತಿಯೊಂದು ವ್ಯವಹಾರಗಳನ್ನು ನಿಯಂತ್ರಿಸುತ್ತವೆ. ಒಂದು ವೇಳೆ ನೀವು ಅಕೌಂಟ್ ಹೊಂದಿರುವ ಬ್ಯಾಂಕ್ ದಿವಾಳಿಯಾದರೆ ನಿಮ್ಮ ದುಡ್ಡು ಸಿಕ್ಕಿಬಿದ್ದಂತೆ. ಆದರೆ ಸಿಬಿಡಿಸಿ ಒಮ್ಮೆ ನಿಮ್ಮ ವಾಲೆಟ್‌ಗೆ ಬಂದರೆ, ನೀವು ಅದನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ವರ್ಗಾಯಿಸದ ಹೊರತು ಬ್ಯಾಂಕುಗಳ ನಿಯಂತ್ರಣದಲ್ಲಿರುವುದಿಲ್ಲ. ನಿಮ್ಮೆಲ್ಲಾ ಡಿಜಿಟಲ್ ವ್ಯವಹಾರಗಳು ಒಂದು ಪ್ರೈವೇಟ್ ಬ್ಲಾಕ್‌ಚೈನ್ ಊರ್ಜಿತವಾಗಿಸುತ್ತದೆ. ಈ ದುಡ್ಡಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಖಾತ್ರಿ ಕೊಡುತ್ತದೆ.
ಆರ್‌ಬಿಐಗೆ ಏನು ಲಾಭ?
ಡಿಜಿಟಲ್ ರುಪೀ ಬಳಕೆಯಿಂದ ಆರ್‌ಬಿಐಗೆ ನಗದು ಹಣವನ್ನು
ಮುದ್ರಿಸುವ, ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಖರ್ಚು ಉಳಿತಾಯವಾಗುತ್ತದೆ. ಇದು ಡಿಜಿಟಲ್ ರೂಪದಲ್ಲಿ ಇರುವ ಕಾರಣ ಇದನ್ನು ಪ್ರೋಗ್ರಾಮ್ ಮಾಡಿ, ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸುವಂತೆ ಮಾಡುವ ಅವಕಾಶ ಇಲ್ಲಿರುತ್ತದೆ. ಹಂಚಿಕೆ, ನೇರ ನಗದು ವರ್ಗಾವಣೆಯಲ್ಲಿ ಪಾರದರ್ಶಕತೆಯನ್ನು ತರುವುದಕ್ಕೂ ಇದನ್ನು ಬಳಕೆ ಮಾಡಬಹುದು. ನಿಮಗೆ ಗೊಬ್ಬರ ಖರೀದಿ ಮಾಡುವುದಕ್ಕೆ ನೀಡಿದ ಸಬ್ಸಿಡಿ ದುಡ್ಡನ್ನು ಅಲ್ಲಿ ಮಾತ್ರ ಬಳಕೆ ಮಾಡಲು ಅವಕಾಶ ಕೊಡುವ, ಬೇರೆ ಕಡೆ ಆ ದುಡ್ಡು ಬಳಕೆ ಮಾಡದಂತೆ ನೋಡಿಕೊಳ್ಳುವ ನಿಯಂತ್ರಣ ಹೇರುವುದು ಇಲ್ಲಿ ಸಾಧ್ಯವಿದೆ. ವಿದೇಶಿ ವಿನಿಮಯವನ್ನು ರೂಪಾಯಿಯ ಮೂಲಕವೇ ಮಾಡಲು, ಈಗ ಬಳಕೆಯಾಗುತ್ತಿರುವ ಸ್ವಿಫ್ಟ್' ಅನ್ನುವ ಡಾಲರ್ ಮೂಲಕ ನಡೆಯುವ ವ್ಯವಹಾರಗಳನ್ನು ಕಡಿಮೆ ಮಾಡಲು ಕೂಡಾ ಇದನ್ನು ಮುಂದಿನ ದಿನಗಳಲ್ಲಿ ಬಳಸಲು ಅವಕಾಶ ಇದೆ. ಹಾಗಾದರೆ ಇದು ಒಂದು ರೀತಿಯ ಕ್ರಿಪ್ಲೊ ಕರೆನ್ಸಿಯಾ? ಹೀಗೊಂದು ಪ್ರಶ್ನೆ ಬರುವುದು ಸಹಜ.
ಇ-ರುಪೀ ಅನ್ನೋದು ಕ್ರಿಸ್ಟೋಕರೆನ್ಸಿ ಅಲ್ಲ!
# ಮೊಟ್ಟಮೊದಲನೆಯದ್ದು ಹಣದ ಮೌಲ್ಯ. ನೀವು ಒಂದು
ರೂಪಾಯಿ ಮೌಲ್ಯದ ಇ-ರುಪೀಯನ್ನು ಹೊಂದಿದ್ದರೆ ಅದರ ಲ್ಯದಲ್ಲಿ
ಬದಲಾವಣೆ ಆಗುವುದಿಲ್ಲ. ಕ್ರಿಸ್ಟೋದಲ್ಲಿ ಕ್ಷಣಕ್ಷಣಕ್ಕೂ ಮೌಲ್ಯದಲ್ಲಿ
ವ್ಯತ್ಯಾಸವಾಗುತ್ತದೆ.
# ಕ್ರಿಸ್ಟೋ ಕರೆನ್ಸಿಗಳು ಯಾವುದೇ ಗ್ಯಾರೆಂಟಿ ಇಲ್ಲದ, ಬರೀ ಅವುಗಳ ಬ್ಲಾಕ್‌ಚೈನಿನ ಕಾರಣದಿಂದ ಒಂದು ಮೌಲ್ಯ ಪಡೆಯುತ್ತವೆ. ಆದರೆ ಇ-ರುಪೀಯ ಮೌಲ್ಯವನ್ನು ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ ಮತ್ತೆ ಅದಕ್ಕೆ ಬೇಕಾದ ಗ್ಯಾರಂಟಿ ಕೂಡಾ ಕೊಡುತ್ತದೆ.
# ಕ್ರಿಸ್ಟೋ ಕರೆನ್ಸಿಗಳು 'ಡಿಸಿಬ್ಯುಟೆಡ್ ಬ್ಲಾಕ್ ಚೈನ್ ಅಂದರೆ
ವಿಕೇಂದ್ರಿತ ಬ್ಲಾಕ್ ಚೈನ್ ಬಳಕೆ ಮಾಡಿದರೆ ಸಿಬಿಡಿಸಿ ಒಂದು ಕೇಂದ್ರೀಕೃತ ಪ್ರೈವೇಟ್ ಬ್ಲಾಕ್‌ಚೈನನ್ನು ಬಳಕೆ ಮಾಡುತ್ತದೆ. ಇದನ್ನು ಆರ್‌ಬಿಐ ನಿಯಂತ್ರಿಸುತ್ತದೆ.
0 ಕಾಮೆಂಟ್‌ಗಳು