ಅಂಗವಿಕಲರಿಗೆ ಮೀಸಲು ಶೀಘ್ರ ರೋಸ್ಟರ್ ಬಿಂದು ಗುರುತಿಸುವಿಕೆಗೆ ಚಾಲನೆ / ಹೆಚ್ಚಿನ ಸರ್ಕಾರಿ ಉದ್ಯೋಗ

 ಅಂಗವಿಕಲರಿಗೆ ಮೀಸಲು ಶೀಘ್ರ ರೋಸ್ಟರ್ ಬಿಂದು ಗುರುತಿಸುವಿಕೆಗೆ ಚಾಲನೆ / ಹೆಚ್ಚಿನ ಸರ್ಕಾರಿ ಉದ್ಯೋಗ


ಅಂಗವಿಕಲರಿಗೆ ಮೀಸಲು ಶೀಘ್ರ ರೋಸ್ಟರ್ ಬಿಂದು ಗುರುತಿಸುವಿಕೆಗೆ ಚಾಲನೆ / ಹೆಚ್ಚಿನ ಸರ್ಕಾರಿ ಉದ್ಯೋಗ



ರಾಜ್ಯದಲ್ಲಿರುವ ಅಂಗವಿಕಲರಿಗೆ ಸರ್ಕಾರ ಇಲ್ಲೊಂದು ಶುಭ ಸುದ್ದಿ ನೀಡಿದೆ. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಅಂಗವಿಕಲರಿಗೆ ಹೆಚ್ಚಿನ ಅವಕಾಶ ಸಿಗುವಂತೆ ಮಾಡುವ ಉದ್ದೇಶದಿಂದ ಎಲ್ಲ ಇಲಾಖೆಗಳಲ್ಲಿ ರೋಸ್ಟರ್ ಬಿಂದು ಗುರುತಿಸುವ ಕೆಲಸಕ್ಕೆ ಚಾಲನೆ ನೀಡಿದೆ. ರಾಜ್ಯದಲ್ಲಿ ಮೊದಲು 7 ರೀತಿಯ ಅಂಗವಿಕಲತೆಯನ್ನು ಗುರುತಿಸಲಾಗುತ್ತಿತ್ತು. ಆದರೆ 2016 ರಿಂದ 21 ರೀತಿಯ ಅಂಗ ವೈಕಲ್ಯವನ್ನು 2011ರ ಗಣತಿಯ ಪ್ರಕಾರ ರಾಜ್ಯದಲ್ಲಿ 13,24,205 ಅಂಗವಿಕಲರಿದ್ದಾರೆ. 

ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು. ಇತರರಂತೆ ಸರ್ಕಾರದ ಹುದ್ದೆಗಳು ಹಾಗೂ ಸೌಲಭ್ಯವನ್ನು ಪಡೆದು ಗೌರವಯುತವಾಗಿ ಬದುಕು ಸಾಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಸಾಮಾಜಿಕ ಭದ್ರತೆಯೊಂದಿಗೆ ಸರ್ವತೋಮುಖ ಅಭಿವೃದ್ಧಿಯಾಗುವಂತೆ ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಕಡೆ ಸರ್ಕಾರ ಆದ್ಯತೆ ನೀಡಿದೆ. ಸರ್ಕಾರ 2016ರಲ್ಲಿ ಅಂಗವಿಕಲರಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀತಿ ಜಾರಿಗೆ ತಂದಿತು. ಅದರ ಪ್ರಕಾರ ಎ ಮತ್ತು ಬಿ ಶ್ರೇಣಿಯ ಹುದ್ದೆಗಳಲ್ಲಿ ಶೇ.4 ಹಾಗೂ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿ ಶೇ.4 ಮೀಸಲಾತಿ ನಿಗದಿ ಮಾಡಲಾಗಿದೆ. ತಾಯಂದಿರಿಗೆ ತರಬೇತಿ: ಅಂಗವೈಕಲ್ಯದಲ್ಲಿಯೇ ಶ್ರವಣದೋಷ ಅತ್ಯಂತ ಗಂಭೀರ ಸಮಸ್ಯೆ. ಆದ್ದರಿಂದಪೋಷಣೆಯ ಬಗ್ಗೆ ತಾಯಂದಿರಿಗೆ ಕಾರ್ಯಕ್ಕೆ ಸರ್ಕಾರ ಚಾಲನೆ ಸಂಸ್ಥೆಗಳಿಗೆ ತರಬೇತಿಯ ಹೊಣೆ ಬರುವ ತಾಯಂದಿರಿಗೆ ಮಾಸಿಕ ಸಂಭಾವನೆ ನೀಡಲಾಗುತ್ತದೆ. ಪ್ರತಿ ಬಾರಿ ತಲಾ 25 ಜನರಿಗೆ ತರಬೇತಿ ಈ ವರ್ಷ 1.06 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಂಗವಿಕಲರಿಗಾಗಿ: ಅಂಗವಿಕಲರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವುದು, ಮನೆ ಬಾಗಿಲಿಗೆ ತಲುಪಿಸಲು ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಇವರೆಲ್ಲರೂ ಸಹ ಅಂಗವಿಕಲರೇ ವಿಶೇಷ. 


ಆದ್ದರಿಂದಲೇ ಈ ಅಂಗವಿಕಲರಿಂದಲೇ ಅಂಗವಿಕಲರೇ ಎಂದು ಕರೆಯಲಾಗುತ್ತದೆ. ಪಂಚಾಯಿತಿಗೆ ಒಬ್ಬ ಕಾರ್ಯಕರ್ತರಿದ್ದಾರೆ. ರೋಸ್ಟರ್ ಬಿಂದು ಗುರುತಿಸುವಿಕೆಗೆಚಾಲನೆ ಮೀಸಲಾತಿ నితి ಜಾರಿಗೆ ಬಂದಿದ್ದರೂ ರೋಸ್ಟರ್ ಬಿಂದು ಗುರುತಿಸುವುದು ಅತ್ಯಂತ ಮುಖ್ಯ ಕೆಲಸವಾಗಿದೆ. ಮೀಸಲಾತಿ ಜಾರಿಯಾಗಿ ವರ್ಷದ ನಂತರ ಆ ಕಾರ್ಯ ನೀಡಲಾಗಿದೆ. ಪ್ರತಿ ಇಲಾಖೆಯಲ್ಲಿಯೂ ಅಂಗವಿಕಲರು ನಿರ್ವಹಿಸಬಹುದಾದ ಹುದ್ದೆಗಳನ್ನು ಗುರುತಿಸಿ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ನೀಡುವ
ಕಾರ್ಯವೇ ರೋಸ್ಟರ್‌ ಬಿಂದು, 61 ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳಲ್ಲಿ ಈ ಕಾರ್ಯ ನಡೆದಿದ್ದು ಒಂದು ವರ್ಷದಲ್ಲಿ ಪೂರ್ಣವಾಗಲಿದೆ. ಅಂಗವಿಕಲರು ಹೆಚ್ಚಿನ ಶಿಕ್ಷಣ ಪಡೆದು ಸರ್ಕಾರಿ ಹುದ್ದೆ ಪಡೆಯಲು ಅನುಕೂಲವಾಗುತ್ತದೆ. ವಿವಿಧ ಹುದ್ದೆಗಳಿಗೆ ನೇರ ನೇಮಕ ಅಥವಾ ವಿವಿಧ ನೇಮಕಾತಿ ಸಂಸ್ಥೆಗಳ ಮೂಲಕ ಭರ್ತಿ ಮಾಡುವ ಸಂದರ್ಭದಲ್ಲಿ ರೋಸ್ಟರ್‌ ಬಿಂದುವನ್ನು ಪರಿಗಣಿಸಲಾಗುತ್ತದೆ. ಎಷ್ಟು ಹುದ್ದೆಗಳು ಅಂಗವಿಕಲರಿಗೆ ಸಿಗಲಿವೆ ಎಂಬುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ಮೀಸಲಾತಿ ಪ್ರಕಾರವೇ ಹುದ್ದೆಗಳು ಅಂಗವಿಕಲರಿಗೆ ಲಭ್ಯವಾಗಲಿವೆ. ರೋಸ್ಟರ್ ಬಿಂದು ಗುರುತಿಸುವ ಕೆಲಸ ಎಲ್ಲ ಇಲಾಖೆಗಳಲ್ಲಿ ಆದಾಗ ಮಾತ್ರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 


ಅಂತಹ ಮಕ್ಕಳ ಪೋಷಣೆಯ ಬಗ್ಗೆ ತಾಯಂದಿರಿಗೆ ತರಬೇತಿ ನೀಡುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಎರಡು ಸಂಸ್ಥೆಗಳಿಗೆ ತರಬೇತಿಯ ಹೊಣೆ ನೀಡಿದೆ. ತರಬೇತಿಗೆ ಬರುವ ತಾಯಂದಿರಿಗೆ ಮಾಸಿಕ 2000 ರೂ. ಸಂಭಾವನೆ ನೀಡಲಾಗುತ್ತದೆ. 
ಪ್ರತಿಸಂಸ್ಥೆಯಲ್ಲಿ ಒಂದು ಬಾರಿ ತಲಾ 25 ಜನರಿಗೆ ತರಬೇತಿ ನೀಡಲಾಗುತ್ತದೆ. ಈ ವರ್ಷ 1.06 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಅಂಗವಿಕಲರಿಂದ ಅಂಗವಿಕಲರಿಗಾಗಿ: ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವುದು, ಯೋಜನೆಗಳು ಮನೆ ಬಾಗಿಲಿಗೆ ತಲುಪಿಸಲು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಇವರೆಲ್ಲರೂ ಸಹ ಅಂಗವಿಕಲರೇ ಆಗಿರುವುದು ವಿಶೇಷ. ಆದ್ದರಿಂದಲೇ ಈ ಯೋಜನೆಯನ್ನು ಅಂಗವಿಕಲರಿಂದಲೇ ಅಂಗವಿಕಲರೇ ಅಂಗವಿಕಲರಿಗಾಗಿ ಎಂದು ಕರೆಯಲಾಗುತ್ತದೆ.


ಪ್ರತಿ ಪಂಚಾಯಿತಿಗೆ ಒಬ್ಬ ಕಾರ್ಯಕರ್ತರಿದ್ದಾರೆ. ಪಟ್ಟಣಗಳಲ್ಲಿ 150 ಜನ ಹಾಗೂ ತಾಲೂಕು ಕೇಂದ್ರದಲ್ಲಿ 168 ಜನ ಕಾರ್ಯ ನಿರ್ವಹಿಸುತ್ತಾರೆ. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವವರಿಗೆ 9 ಸಾವಿರ ರೂ. ಹಾಗೂ ಪಟ್ಟಣಗಳಲ್ಲಿ ಇರುವ ಕಾರ್ಯಕರ್ತರಿಗೆ 15 ಸಾವಿರ ರೂ. ನೀಡಲಾಗುತ್ತಿದೆ. ವಾಸಿಸುವ ಸ್ಥಳದಲ್ಲಿಯೇ ಸುಮಾರು 6500 ಜನರಿಗೆ ಉದ್ಯೋಗ ಸಿಕ್ಕಂತೆ ಆಗಿದೆ. ಜತೆಗೆ ಉಳಿದ ಅಂಗವಿಕಲರಿಗೆ ನೆರವು ನೀಡಬಹುದಾಗಿದೆ.

ಇರುವ ಸೌಲಭ್ಯಗಳು ?

ಶೈಕ್ಷಣಿಕ ಪುನರ್ವಸತಿ ಯೋಜನೆಯಡಿ ಕಿವುಡ ಮಕ್ಕಳಿಗೆ ವಿಶೇಷ ಶಾಲೆಗಳು ಇದ್ದು ಈ ವರ್ಷ 47.08 ಕೋಟಿ ವೆಚ್ಚಮಾಡಲಾಗುತ್ತಿದೆ. ಒಟ್ಟು 12,500 ಜನ ವಿಶೇಷ ಚೇತನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

• ಅಂಗವಿಕಲ ವಿದ್ಯಾರ್ಥಿಗಳಿಗೆ 1ನೇ ತರಗತಿಯಿಂದ ವಿಶ್ವವಿದ್ಯಾನಿಲಯದ ಮಟ್ಟದವರೆಗೆ ಓದುತ್ತಿರುವ ಅರ್ಹರಿಗೆ
ವಿದ್ಯಾರ್ಥಿವೇತನಕ್ಕೆ ಈ ವರ್ಷ 6 ಕೋಟಿ ರೂ. ವೆಚ್ಚ. ಶುಲ್ಕ ಮರುಪಾವತಿ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ

• 84.90ಲಕ್ಷಗಳನ್ನು 1382 ಫಲಾನುಭವಿಗಳು ಈ
ಯೋಜನೆಯನ್ನು ಪಡೆದಿರುತ್ತಾರೆ.


• ವಿವಾಹ ಪ್ರೋತ್ಸಾಹ ಧನ ಯೋಜನೆಗಾಗಿ ಈ ವರ್ಷ
130.50 ಲಕ್ಷ ರೂ. ಮೀಸಲು



• ಅಂಧ ಮಹಿಳೆಗೆ ಜನಿಸುವ ಮಕ್ಕಳ ಆರೋಗ್ಯ, ಪೌಷ್ಠಿಕ ಆಹಾರ
ಮತ್ತು ಪಾಲನೆಗೆ ಅನುವಾಗುವಂತೆ 2 ಮಕ್ಕಳಿಗೆ
ಸೀಮಿತಗೊಳಿಸಿ ಪ್ರತಿ ಹೆರಿಗೆಯ

• ನಂತರ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆಯನ್ನು
2 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಣೆ

• ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನಸಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳ ಗೌರವಧನ ಶೇ.50 ರಷ್ಟು ಹೆಚ್ಚಳ ಬೈಲ್ ಕಂ.ಟಾಕಿಂಗ್ ಲೈಬ್ರರಿಯನ್ನು ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಸ್ಥಾಪನೆ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿಗಳ ಸ್ಥಾಪನೆ ಕೇಂದ್ರ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ ವಿತರಣೆ  ಯೋಜನೆಯಡಿ ಈಗಾಗಲೆ 5.90ಲಕ್ಷ

* ವಿತರಣೆ ಮಾಡಲಾಗಿದ್ದು, ಒಟ್ಟು 9.06ಲಕ್ಷ ಅರ್ಜಿಗಳ ಸಲ್ಲಿಕೆ



• ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡುತ್ತಿದ್ದು
ಕಳೆದ ಮೂರು ವರ್ಷಗಳಲ್ಲಿ 1161 ಲ್ಯಾಪ್‌ಟಾಪ್‌ಗಳನ್ನು
ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ ರೂ.4.00 ಕೋಟಿ
ವೆಚ್ಚದಲ್ಲಿ 333 ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತದೆ
ಛಲವೇ ಇವರಿಗೆ ಪಂಚಮವೇದ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು