Mera Ration :ಬಡವರ ಅಕ್ಕಿಗೆ ಕನ್ನ ಹಾಕುವ ಕದ್ದಿವರಿಗೆ ಲಗಾಮು ಹಾಕುವ ʼಮೇರ ರೇಷನ್‌ ಆಪ್‌ʼ

 ಅನ್ನಭಾಗ್ಯ ಕನ್ನ ತಡೆಗೆ ಆಪ್

Mera Ration App Download



ಕೇಂದ್ರ ಸರ್ಕಾರದಿಂದ ಅಭಿವೃದ್ಧಿ | ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಹಿತಿ

ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಅಕ್ರಮ ಹಾಗೂ ಅನಾಮಿಕ ವ್ಯಕ್ತಿಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಡಿತರ ಎತ್ತುವಳಿ ತಡೆಗೆ ಕೇಂದ್ರ ಸರ್ಕಾರ 'ಮೇರಾ ರೇಷನ್' ಆ್ಯಪ್ ಅಭಿವೃದ್ಧಿಪಡಿಸಿದೆ.
ರಾಜ್ಯದಲ್ಲಿ 1,15,82,636 ಬಿಪಿಎಲ್, 23,96,619 ಎಪಿಎಲ್ ಹಾಗೂ  10,90,818 ಅಂತ್ಯೋದಯ ಸೇರಿ ಒಟ್ಟು 1,50,70,073 ರೇಷನ್ ಕಾರ್ಡ್ ದಾರರಿದ್ದಾರೆ. ಇವರಿಗೆ ಪ್ರತಿ ತಿಂಗಳು 20,204 ನ್ಯಾಯಬೆಲೆ ಅಂಗಡಿ ಸೇರಿ ಕನ್ಸೂಮರ್ ಕ್ರೆಡಿಟ್ ಸೊಸೈಟಿಗಳು (ಸಿಸಿಎಸ್) ರೇಷನ್ ವಿತರಿಸುವ ಕಾರ್ಯದಲ್ಲಿತೊಡಗಿವೆ. ಆದರೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರ ಹೆಸರಿನಲ್ಲಿ ಅನಾಮಿಕ ವ್ಯಕ್ತಿಗಳು,ಪರವಾನಗಿ ನವೀಕರಣ ಮಾಡದ ನ್ಯಾಯಬೆಲೆ ಅಂಗಡಿಗಳು ಹಾಗೂ ಸಿಸಿಎಸ್‌ ಗಳು ಪ್ರತಿ ತಿಂಗಳು ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡುತ್ತಿವೆ. ಇದರಿಂದಾಗಿ ಆಹಾರ ಭದ್ರತೆ ಯೋಜನೆಯಡಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ.ಇವುಗಳ ತಡೆಗೆ ಹಾಗೂ ಪಾರದರ್ಶಕವಾಗಿ ಪಡಿತರ ಹಂಚಿಕೆಗೆ ರಾಜ್ಯದಲ್ಲಿರುವಎಲ್ಲ ನ್ಯಾಯಬೆಲೆ ಅಂಗಡಿಗಳ ಸ್ಥಳ ಮತ್ತು ಪಡಿತರ ಚೀಟಿಗಳ ವಿವರ ಪರಿಶೀಲಿಸಲು “ಮೇರಾ ರೇಷನ್' ಸಿದ್ಧಪಡಿಸಲಾಗಿದೆ. ಈ ಆ್ಯಪ್‌ನಲ್ಲಿ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳ ವಿವರವನ್ನು ಆದಷ್ಟು ಬೇಗ ಅಪ್‌ಲೋಡ್ ಮಾಡಬೇಕೆಂದು ಆಯಾ ಮಾಲೀಕರಿಗೆ ಆಹಾರ ಇಲಾಖೆ ಸೂಚಿಸಿದೆ.ಮಾಲೀಕರಿಗೆ ಸೂಚನೆ: ನ್ಯಾಯಬೆಲೆ ಅಂಗಡಿ ಮಾಲೀಕರು ಗೂಗಲ್ಪ್ಲೇ  ಸ್ಟೋರ್‌ನಲ್ಲಿರುವ 'ಮೇರಾ ರೇಷನ್' ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು.ನಂತರ ಕೋರಲಾಗಿರುವ ಮಾಹಿತಿಗಳನ್ನು ದಾಖಲಿಸಬೇಕು. ಜತೆಗೆ,ನ್ಯಾಯಬೆಲೆ ಅಂಗಡಿ ಮುಂಭಾಗದ ಫೋಟೋ ತೆಗೆಯಬೇಕು. ನಂತರ, ಪಕ್ಕದಲ್ಲಿರುವ ಸೆಂಡ್ ಲೊಕೇಷನ್ ಕ್ಲಿಕ್ ಮಾಡಿದರೆ ಲೊಕೇಷನ್ ಯಶಸ್ವಿಯಾಗಿ ಸೇವ್ ಆಗಿದೆ ಎಂದು ಪಾಪ್ ಅಪ್ ಮೆಸೇಜ್ ಕಾಣಿಸುತ್ತದೆ. ಆಗ ನಿಮ್ಮ ಮಾಹಿತಿ ಅಪ್‌ಲೋಡ್ ಆಗಿದೆ ಎಂದು ದೃಢೀಕರಿಸಿಕೊಳ್ಳಬೇಕು.


ಪಡಿತರ ವಿತರಣೆಯಲ್ಲಿಇನ್ನಷ್ಟು ಪಾರದರ್ಶಕತೆ ತರಲು ಕೇಂದ್ರ ಸರ್ಕಾರ 'ಮೇರಾ ರೇಷನ್” ಆ್ಯಪ್ ಅಭಿವೃದ್ಧಿಪಡಿಸಿದೆ.
ಆ್ಯಪ್‌ನಲ್ಲಿ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿದರೆ ರೇಷನ್ ಹಂಚಿಕೆ ಸೇರಿ ಇತರೆ ಮಾಹಿತಿಗಳು ಸಿಗಲಿವೆ. ಜತೆಗೆ, ನ್ಯಾಯಬೆಲೆ ಅಂಗಡಿಗಳ ಲೊಕೇಷನ್ ಮತ್ತುವಿವರ ದೃಢೀಕರಣ ಪ್ರಕ್ರಿಯೆಯೂನಡೆಯುತ್ತಿದೆ.


ಅಕ್ರಮ ದಾಸ್ತಾನಿಗೆ ಕಡಿವಾಣ ಮಾಹಿತಿ ಲಭ್ಯ ಕಾರ್ಡ್‌ದಾರರಿಗೆ ರೇಷನ ವಿತರಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಈ ಆ್ಯಪ್ ನೆರವಾಗಲಿದೆ. ಕಾರ್ಡ್‌ದಾರರು ಮೊಬೈಲ್‌ನಲ್ಲಿ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಕಾರ್ಡ್‌ನ ಸಂಖ್ಯೆ ನಮೂದಿಸಿದರೆ ಕಳೆದ ಆರು ತಿಂಗಳಲ್ಲಿಎಷ್ಟು ರೇಷನ್ ವಿತರಿಸಲಾಗಿದೆ?
ಹತ್ತಿರದಲ್ಲಿರುವ ರೇಷನ್ ಅಂಗಡಿಗಳ ವಿವರ ಲಭ್ಯವಾಗಲಿದೆ. ಜತೆಗೆ,ಪೋರ್ಟಬಿಲಿಟಿಯಡಿ ಹೊರ ರಾಜ್ಯದ
ಕಾರ್ಡದಾರರಾಗಿದ್ದರೆ ಅವರಿಗೆ ಪೂರೈಸಲಾಗಿರುವ ರೇಷನ್ ಪ್ರಮಾಣ ಸೇರಿ ಇತರ ಮಾಹಿತಿಗಳು ಸಿಗಲಿವೆ. ಜತೆಗೆ, ಆ್ಯಪ್‌ನಲ್ಲಿ ಕಾರ್ಡ್ ಸಂಖ್ಯೆ ನೋಂದಣಿ ಮಾಡಿಕೊಳ್ಳಬಹುದು.ಕಾರ್ಡ್‌ದಾರರಿಗೆ ವಿತರಿಸದೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ಅಕ್ರಮ ದಾಸ್ತಾನು ಮಾಡುವುದಕ್ಕೆ ಆ್ಯಪ್‌ನಿಂದ ಕಡಿವಾಣ ಬೀಳಲಿದೆ. 


ಭಾರತ ಆಹಾರ ನಿಗಮ (ಎಫ್‌ಸಿಐ) ಗೋದಾಮುಗಳಿಂದ ಇಲಾಖೆಯ ಸಗಟು ಮಳಿಗೆಗಳಿಗೆ ಪಡಿತರ ಧಾನ್ಯಗಳನ್ನು ಸರಕು ಲಾರಿಯಲ್ಲಿ ಸಾಗಿಸುವ ವೇಳೆ ಕದಿಯುವುದು, ಇಲಾಖೆಯ ಸಗಟು ಮಳಿಗೆಗಳಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದ ಹೆಚ್ಚುವರಿ ದಾಸ್ತಾನು ಸಂಗ್ರಹ, ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಲಾರಿಗಳಲ್ಲಿ ಸಾಗಿಸುವುದು, ಅನಧಿಕೃತವಾಗಿ ಅಕ್ಕಿ ಗಿರಣಿಯಲ್ಲಿ ದಾಸ್ತಾನು, ಆಹಾರ ನಿರೀಕ್ಷಕರು ಹಾಗೂ ಆಹಾರ ಶಿರಸ್ತೇದಾರರು ಫಲಾನುಭವಿಗಳ ಮನೆಯಲ್ಲಿ ಅಕ್ರಮವಾಗಿದಾಸ್ತಾನು ಮಾಡುವಂಥ ಅಕ್ರಮಗಳನ್ನು ಈ ಆ್ಯಪ್ ತಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು