Taxi , auto Driver Children Vidya Nidhi Scholarship 2023 : ವಿದ್ಯಾನಿಧಿ

Taxi  auto Driver Children Vidya Nidhi Scholarship 2023 apply Online


ರಾಜ್ಯದ ಹಳದಿ ಬೋರ್ಡ್‌ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳ ಮೆಟ್ರಿಕ್‌ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು 'ವಿದ್ಯಾನಿಧಿ' ಯೋಜನೆಯಲ್ಲಿ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Taxi  auto Driver Children Vidya Nidhi Scholarship 2023 apply Online



ಕರ್ನಾಟಕದಲ್ಲಿಅಧಿಕೃತ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಡಿಪ್ಲೋಮ, ಐಟಿಐ, ಪದವಿ, ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ ಫಾರ್ಮ್, ನರ್ಸಿಂಗ್‌, ಎಂಬಿಬಿಎಸ್‌, ಬಿಇ, ಬಿ.ಟೆಕ್‌ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ

ಚಾಲಕರ ಮಕ್ಕಳು ವಿದ್ಯಾನಿಧಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

  • ಚಾಲಕರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
  • ಅರ್ಜಿ ಸಲ್ಲಿಸುವ ಸಂದರ್ಭಗಳಲ್ಲಿ ಅಥವಾ ಅರ್ಹತೆ ಅನುಸಾರ ಪರಿಗಣಿಸುವ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಾದೇಶಿಕ/ ಸಹಾಯಕ ಪ್ರದೇಶಿಕ ಸಾರಿಗೆ ಕಛೇರಿಗಳಲ್ಲಿ ಮೋಟಾರು ಕ್ಯಾಬ್/ ಆಟೋರಿಕ್ಷಾ ಕ್ಯಾಬ್ ವರ್ಗಗಳ ಸಾರಿಗೆ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾಪತ್ರ ಹೊಂದಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಮತ್ತು ಆಟೋರಿಕ್ಷಾ ( yellow board taxi & autorickshaw) ಚಾಲಕರಿಗಿರಬೇಕು.
  • ಈ ಉದ್ದೇಶಕ್ಕೆ ಚಾಲಕರ “ಕುಟುಂಬ” ಎಂದರೆ ರಾಜ್ಯದ ಇ- ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ “ಕುಟುಂಬ” ತಂತ್ರಶದಲ್ಲಿ ದಾಖಲಾಗಿರುವ ಸದಸ್ಯರು.
  • ಚಾಲಕರ ಮಕ್ಕಳು ಎಸ್ ಎಸ್ ಎಲ್ ಸಿ ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರಬೇಕು

ಸರ್ಕಾರದ ಆದೇಶ ಸಂಖ್ಯೆ: ಟಿಡಿ 68 ಟಿಡಿಒ 2022 ದಿನಾಂಕ: 27-07-2022 ಮತ್ತು ದಿನಾಂಕ:25-08-2022 ರ ಅಧಿಸೂಚನೆ ಅನ್ವಯ 2022-23 ಸಾಲಿನ ಆಯವ್ವಯ ಭಾಷಣ ಕಂಡಿಕೆ -395ರಲ್ಲಿ ಘೋಷಿಸುವಂತೆ ರಾಜ್ಯದಲ್ಲಿನ “ಯೆಲ್ಲೋ ಬೋರ್ಡ್” (yellow Board) ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ (post metric) ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ” ವಿದ್ಯಾನಿಧಿ” ಯೋಜನೆಯನ್ನು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆಯನ್ನು ಅನುಷ್ಟಾನಗೊಳಿಸಲು ಈ ಕೆಳಕಂಡ ಅರ್ಹತೆಗಳು/ ಷರತ್ತುಗಳು ನಿಬಂಧನೆಗೆ ಒಳಪಟ್ಟು ಆದೇಶವನ್ನು ಹೊರಡಿಸಲಾಗಿದೆ.

ಚಾಲಕರ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಸಿಗುತ್ತೆ?


ಕ್ರ.ಸ. ಕೋರ್ಸ್ ನ ಹೆಸರು/ ವಿಧಗಳು ಹುಡುಗರು/ಪುರುಷರು ಹುಡುಗಿಯರು/ ಅನ್ಯ ಲಿಂಗದವರು
1 ಪದವಿ ಮುಂಚೆ ಪಿಯುಸಿ,/ ಐಟಿಐ/ ಡಿಪ್ಲೊಮಾ ರೂ.2,500/– ರೂ.3,000/-
2 ಎಲ್ ಬಿ ಎ/ ಬಿ ಎಸ್ ಸಿ/ ಬಿ ಕಾಂ, ಪದವಿ, ಇತ್ಯಾದಿ ( ಎಂ ಬಿ ಬಿ ಎಸ್/ ಬಿ ಟೇಕ್/ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ) ರೂ.5,000/- ರೂ.5,500/-
3 ನರ್ಸಿಂಗ್, ಇತ್ಯಾದಿ, ವೃತ್ತಿಪರ ಕೋರ್ಸ್ ಗಳು ಎಲ್ ಎಲ್ ಬಿ/ ಪ್ಯಾರಾ ಮೆಡಿಕಲ್/ ಬಿ ಫಾರ್ಮ್/ ಕೋರ್ಸ್ ಗಳು ರೂ.7,500/- 8,000/-
4 ಎಂ ಬಿ ಬಿ ಎಸ್/ ಬಿ ಇ/ ಬಿ ಟೆಕ್ ಮತ್ತು ಎಲ್ಲಾ ಸ್ನಾತ್ತಕೋತ್ತರ ಕೋರ್ಸ್ ಗಳು ರೂ.10,000/- 11,000/-

Taxi , auto Driver Children Vidya Nidhi Scholarship 2023


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು