Free Bus ride For Womens ಈ ಕುರಿತು KSRTC ಕಾರ್ಯರ್ದಶಿಯಿಂದ CMಗೆ ಪತ್ರ ಸಮಸ್ಯೆ ಬಗೆಹರಿಸುವಂತೆ ಅಗ್ರಹ
2023 ರ ಕರ್ನಾಟಕ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ, ಕಾಂಗ್ರೆಸ್ ಪಕ್ಷವು ಹಲವಾರು ಭರವಸೆಗಳನ್ನು ಘೋಷಿಸಿತು, ಅವುಗಳಲ್ಲಿ ಒಂದು "ಶಕ್ತಿ" — ರಾಜ್ಯಾದ್ಯಂತ ಸಾಮಾನ್ಯ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಭರವಸೆಯಾದ ಮಹಿಳೆಯರಿಗೆ ಉಚಿತ ಬಸ್ ಸೇವೆ, ಪ್ರಯಾಣಿಕರು ಮತ್ತು ಬಸ್ ಕಂಡಕ್ಟರ್‌ಗಳ ನಡುವೆ ಆಗಾಗ್ಗೆ ಘರ್ಷಣೆಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಪತ್ರದಲ್ಲಿ ಹೀಗಿದೆ.
ಶ್ರೀಯುತ ಸಿದ್ದರಾಮಯ್ಯನವರು ಸನ್ಮಾನ್ಯ ಮುಖ್ಯಮಂತ್ರಿ ಅವರು ಕರ್ನಾಟಕ ರಾಜ್ಯ ಸರ್ಕಾರ ವಿಧಾನಸೌಧ ಬೆಂಗಳೂರು
ಸನ್ಮಾನ್ಯ ಮುಖ್ಯಮಂತ್ರಿ ಅವರೇ
ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿದ್ದಕ್ಕೆ ತಮ್ಮನ್ನು ಆರ್ಥಿಕವಾಗಿ ಅಭಿನಂದಿಸುತ್ತೇವೆ ತಾವು ಚುನಾವಣಾ ಸಂದರ್ಭದಲ್ಲಿ ಕೊಟ್ಟಿರುವ ಭರವಸೆಗಳು ಜನರ ಮನಸನ್ನು ಹಾಕಿ ರಾಜ್ಯದ ಜನತೆಯು ಇವುಗಳನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಪಕ್ಷಕ್ಕೆ ನಿಚ್ಚಳ ಬಹುಮತವನ್ನು ಕೊಟ್ಟು ಐದು ವರ್ಷಗಳ ಕಾಲ ಅಧಿಕಾರ ನಡೆಸಲು ಆಶೀರ್ವದಿಸಿದೆ ಎಂದು ನಾವು ಭಾವಿಸುತ್ತೇವೆ ಯಾವುದೇ ಸರ್ಕಾರ ಬಂದ ತಕ್ಷಣ ಅದು ಎಲ್ಲಾ ಭರವಸೆಗಳನ್ನು ತಕ್ಷಣ ಜಾರಿ ಮಾಡಲು ಸಾಧ್ಯವಿಲ್ಲವೆಂಬುದು ನಮಗೂ ತಿಳಿದ ವಿಷಯವಾಗಿದೆ ಆದರೂ ಕೂಡ ಕೆಲವು ಭರವಸೆಗಳನ್ನು ಹೆಚ್ಚು ವಿಳಂಬವಿಲ್ಲದೆ ಜಾರಿ ಮಾಡುವುದು ಬಹು ಅವಶ್ಯಕವಾಗಿದೆ ಉದಾಹರಣೆಗೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ ಉಚಿತವಾಹನ ಸೇವೆಯನ್ನು ಕಲ್ಪಿಸುವ ಒಂದು ಅಂಶವಿದೆ ಸಹಜವಾಗಿಯೇ ಮಹಿಳೆಯರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಕೂಡಲೇ ಸೌಲಭ್ಯವನ್ನು ಬಯಸುತ್ತಾರೆ ನಮಗೆ ತಳಮಟ್ಟದಿಂದ ಬಂದಿರುವ ಮಾಹಿತಿಯಂತೆ ಅನೇಕ ಕಡೆ ಮಹಿಳಾ ಪ್ರಯಾಣಿಕರು ಹಣಕೊಡದೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕೆಂದು ನಿರ್ವಾಹಕರ ಮೇಲೆ ಒತ್ತಡ ಹಾಕುತ್ತಿದ್ದಾರೆ ಹೀಗಾಗಿ ಬಸ್ಸು ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರ ವತಿ ವಾಗ್ವಾದ ನಡೆಯುತ್ತಿದೆ ಇದು ಒಳ್ಳೆ ಸೂಚನೆಯಲ್ಲ ಆದ್ದರಿಂದ ತಾವು ಶೀಘ್ರದಲ್ಲಿಯೇ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಸಾರಿಗೆ ನಿಗಮಗಳಿಗೆ ನಿರ್ದೇಶಬೇಕೆಂದು ತಮ್ಮಲ್ಲಿ ವಿನಂತಿಸುತ್ತೇವೆ .
ಈ ಮೇಲ್ಕಂಡ ತೀರ್ಮಾನವನ್ನು ಜಾರಿ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಹಾಗೂ ಆರ್ಥಿಕ ಅವರೆಯನ್ನು ಸೂಕ್ತ ಅಂದಾಜು ಮಾಡಿ ನಿಗಮಗಳಿಗೆ ವೆಚ್ಚ ಮುಂಗಡವನ್ನು ಮಂಜೂರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಇಂತಿ ತಮ್ಮ ವಿಶ್ವಾಸಿ ವಿಜಯ ಭಾಸ್ಕರ್ KSRTC ಪ್ರಧಾನ ಕಾರ್ಯದರ್ಶಿ ಸಹಿ.
Tags:
0 ಕಾಮೆಂಟ್‌ಗಳು