Anna Bhagya Scheme : BLP/APL Application ಅರ್ಜಿ ಸಲ್ಲಿಸಲು ಪ್ರಾರಂಭ ಯಾವಾಗ
ಹೊಸ ಬಿಪಿಎಲ್ / ಎಪಿಎಲ್ ಕಾರ್ಡ್‌ಗೆ ಅಪ್ಲೈ ಮಾಡಲು ದಿನಾಂಕ ವಿಸ್ತರಣೆ
ಅನ್ನಭಾಗ್ಯ ಯೋಜನೆಯ ಸಲುವಾಗಿ ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಅರ್ಜಿ ಹಾಕಲು ಸರ್ಕಾರ ಅವಕಾಶವನ್ನು ಒದಗಿಸುತ್ತಿದೆ, ಅರ್ಜಿ ಹಾಕಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ತಿಳಿದುಕೊಳ್ಳೋಣ,
ಬಿಪಿಎಲ್ ಕಾರ್ಡ್ ಗಾಗಿ ಲಕ್ಷಾಂತರ ಜನ ಎದುರು ನೋಡುತ್ತಾ ಇದ್ದಾರೆ. ಇದೀಗ ಶೀಘ್ರವೇ ಬಿಪಿಎಲ್ ಕಾರ್ಡ್ ಗುಡ್ ನ್ಯೂಸ್ ಕೊಟ್ಟಿದೆ, ಅದರಲ್ಲು 10 ಕೆಜಿ ಅಕ್ಕಿಯ ಅನ್ನಭಾಗ್ಯ ಯೋಜನೆ ಪಡೆಯೋದಕ್ಕೆ ಬಿಪಿಎಲ್ ಕಾರ್ಡ್ ಬೇಕು.
ಅನ್ನಭಾಗ್ಯ ಯೋಜನೆಗೆ ಆಹಾರ ಇಲಾಖೆ ಸಜ್ಜು ಹೊಸ ಬಿಪಿಎಲ್ ಕಾರ್ಡ್ ಗಳ ಅರ್ಜಿ ಸ್ವೀಕಾರ ಹೌದು ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕೊಣ ಅಂದ್ರೆ ಇಷ್ಟು ದಿನ ಆಹಾರ ಇಲಾಖೆ ವೆಬ್ ಸೈಟ್ ಕ್ಲೋಸ್ ಆಗಿತ್ತು ಇದೀಗ ಜುಲೈನಿಂದ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. ಇದಕ್ಕಾಗಿ ಆಹಾರ ಇಲಾಖೆ ವೆಬ್ ಸೈಟ್ ಅನ್ನು ಮತ್ತಷ್ಟು ಅಭಿವೃದ್ದಿ ಪಡಿಸುತ್ತಾ ಇದ್ದು ಈ ವಾರದಲ್ಲಿಯೆ ಪಡಿತರ ಚೀಟಿಗಳ ಅರ್ಜಿ ಸಲ್ಲಿಕೆಗೆ ಅವಕಾಶ ಕೊಡೋ ಸಾಧ್ಯತೆ.
ರಾಜ್ಯದಲ್ಲಿ ಸದ್ಯ1 ಕೋಟಿ 26 ಲಕ್ಷ ಬಿಪಿಎಲ್ ಕಾರ್ಡ್ ದಾರರಿದ್ದು 10 ಲಕ್ಷದ 90 ಸಾವಿರ ಅಂತ್ಯೋದಯ ಕಾರ್ಡ್ ದಾರರಿದ್ದಾರೆ ಇದೀಗ ಹೊಸದಾಗಿ ಬಿಪಿಎಲ್ ಕಾರ್ಡ್ ಗಳ ವಿತರಣೆಗೆ ಅರ್ಜಿ ಸಲ್ಲಿಕೆ ಶೀಘ್ರವೇ ಆರಂಭವಾಗಲಿದೆ
ಅರ್ಜಿ ಸಲ್ಲಿಸಲು ಇರಬೇಕಾದ ಮಾನದಂಡಗಳು
- ಕುಟುಂಬಸ್ಥರು ಸರ್ಕಾರಿ ನೌಕರರಾಗಿರಬಾರದು.
- ಸರ್ಕಾರಕ್ಕೆ ನೇರವಾಗಿ ತೆರಿಗೆ ಕಟ್ಟುತ್ತಿರಬಾರದು.
- ಕುಟುಂಬದ ಆದಾಯ 1 ಲಕ್ಷಯ 20 ಸಾವಿರ ಮೀರಬಾರದು.
- 3 ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರಬಾರದು.
- ಯಾವುದೆ ಕಮರ್ಷಿಯಲ್ ವಾಹನುಗಳು ಇರಬಾರದು.
- 1ಸಾವಿರ ಚ ಅಡಿಗಿಂತ ಹೆಚ್ಚಿನ ಜಾಗದಲ್ಲಿ ಮನೆ ಇರಬಾರದು
ಈಗಾಗಲೇ ಬಿಪಿಎಲ್ ಕಾರ್ಡ್ ಗೆ ಕಳೆದ ವರ್ಷ 2 ಲಕ್ಷದ 95 ಸಾವಿರ ಅರ್ಜಿಗಳು ಬಂದಿದೆ ಸದ್ಯ ಅವುಗಳನ್ನು Verification ಮಾಡಲಾಗುತ್ತಾ ಇದೆ. ಇದೀಗ ಮತ್ತೆ ಅರ್ಜಿ ಅಹ್ವಾನಕ್ಕೆ ಅವಕಾಶವನ್ನು ನೀಡಲಾಗುತ್ತದೆ. ಜುಲೈ ಆರಂಭದ ಹೊತ್ತಿಗೆ ಬಿಪಿಎಲ್ ಕಾರ್ಡ್ ದಾರರ ಒಟ್ಟು ಸಂಖ್ಯೆ ಎಷ್ಟು ಅನ್ನುವುದು ಗೊತ್ತಾಗುತ್ತೆ.
ಮಾಹಿತಿಗಾಗಿ ಓದಿರಿ :
0 ಕಾಮೆಂಟ್‌ಗಳು