Congress Guarantee of Free travel for women in KSRTC Busses ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಷರತ್ತುಗಳು ಅನ್ವಯ
Congress Guarantee of Free travel for women in KSRTC Busses - ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ ಸೇವೆ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಸನ್ನದ್ದವಾಗಿದೆ. ಆದರೆ, ಕೆಲವೊಂದು ಷರತ್ತುಗಳನ್ನು ರೂಪಿಸಲಾಗಿದೆ. ಅದು ಏನು ಎಂಬುದನ್ನು ಈ ಲೇಖನದಲ್ಲಿ ಓದಿರಿ.
ಉಚಿತವಾಗಿ ಪ್ರಯಾಣಿಸಲು ಪಾಸ್ ಬೇಕಾ ?
ಮಹಿಳೆಯರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಪ್ರತ್ಯೇಕ ಪಾಸ್ ನೀಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಮಹಿಳೆಯರು ಭಾವಚಿತ್ರ ಹಾಗೂ ವಿಳಾಸ ದೃಢೀಕರಣಗೊಳಿಸುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬಹುದಾಗಿದೆ. ಇವುಗಳಲ್ಲಿ ಯಾವುದಾದರೂ ಒಂದು ಇದ್ದರೆ ಸಾಕು.
ಯಾವ ಬಸ್ ನಲ್ಲಿ ಪ್ರಯಾಣ ಮಾಡಬಹುದು ?
ಕೆಎಸ್ಆರ್ ಟಿಸಿ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಕೆಎಸ್ಆರ್ ಟಿಸಿಯ ಹವಾನಿಯಂತ್ರಿತ ಬಸ್ ಗಳಲ್ಲಿ (ಎ.ಸಿ. ಬಸ್ ಗಳಲ್ಲಿ) ಹಾಗೂ ಡಿಲಕ್ಸ್ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ.
ಲೋಕಲ್ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾ?
ನಗರ ಸಾರಿಗೆಗಳ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶವಿದೆ. ಉದಾಹರಣೆಗೆ, ಬೆಂಗಳೂರು ನಗರದಲ್ಲಿ ಬಿಎಂಟಿಸಿ ಸಂಸ್ಥೆ ನಾಗರಿಕರಿಗೆ ಬಸ್ ಸೇವೆ ನೀಡುತ್ತಿದೆ.
ರಾಜ್ಯದ ಮಹಿಳೆಯರಿಗೆ ಮಾತ್ರ ಅವಕಾಶ
ಕರ್ನಾಟಕದಲ್ಲಿ ವಾಸವಿರುವ ಮಹಿಳೆಯರಿಗಷ್ಟೇ ಅವಕಾಶ ಎಂಬ ವಿಚಾರವನ್ನೂ ನಿಯಮಾವಳಿಗಳಲ್ಲಿ ಪ್ರಸ್ತಾಪಿಸಲಾಗಿದೆ. ಹೊರರಾಜ್ಯಗಳಿಂದ ಬರುವ ಮಹಿಳೆಯರಿಗೆ ಇಲ್ಲಿನ ಕೆಎಸ್ಆರ್ ಟಿಸಿಯ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ.
ಹೊರರಾಜ್ಯಗಳಿಗೆ ಹೋಗುವ ಬಸ್ಸುಗಳಲ್ಲಿ ಉಚಿತವಿಲ್ಲ!
ಅನ್ಯ ರಾಜ್ಯಗಳ ಊರುಗಳಿಗೆ ಹೋಗುವ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವು ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಮಾಹಿತಿಗಾಗಿ ಓದಿರಿ : Gruhalakshmi Scheme Karnataka :ಮಹಿಳೆಯರಿಗೆ 2000 ಗೃಹಲಕ್ಷ್ಮಿ ಯೋಜನೆ,ಹಣ ಪಡೆಯಲು ಯಾಲ್ಲರ ಹತ್ತಿರ ಈ ಕಾರ್ಡ್ ಇರಲೇಬೇಕು
0 ಕಾಮೆಂಟ್‌ಗಳು